ರಾಜಕೀಯವನ್ನೇ ಉಸಿರಾಗಿಸಿಕೊಂಡ ದೇವೇಗೌಡರ್ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ಕೂಡ ಇತ್ತೀಚಿಗೆ ಪಕ್ಷದ ಬಲವರ್ಧನೆಗೆ ಸಕ್ರಿಯರಾಗಿದ್ದಾರೆ. ಆದರೆ ರಾಜಕೀಯದ ಮಧ್ಯದಲ್ಲೇ ಸಿನಿ ರೈಡ್ ಕೂಡ ಮುಂದುವರೆಸಿದ್ದು ರೈಡರ್ ಆಗಿ ತೆರೆಗೆ ಬರಲಿದ್ದಾರೆ.

ಸ್ಯಾಂಡಲ್ ವುಡ್ ಗೆ ಬಂದ ವೇಗದಲ್ಲೇ ನಾಲ್ಕನೇ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿಖಿಲ್ ಕುಮಾರ್ ಸ್ವಾಮಿ ರೈಡರ್ ಟೈಟಲ್ ಚಿತ್ರದಲ್ಲಿ ನಾಯಕರಾಗಿ ಶೂಟಿಂಗ್ ಆರಂಭಿಸಿದ್ದಾರೆ.

ಸಧ್ಯ ೪೦ ರಷ್ಟು ಶೂಟಿಂಗ್ ಮುಗಿಸಿರುವ ಚಿತ್ರತಂಡ ನಿಖಿಲ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ರೈಡರ್ ಚಿತ್ರದ ಸ್ಪೆಶಲ್ ಟೀಸರ್ ನಿಖಿಲ್ ಬರ್ತಡೆ ದಿನ ರಿಲೀಸ್ ಆಗಲಿದೆ. ಇದಕ್ಕಾಗಿ ಚಿತ್ರತಂಡ ಸಿದ್ಧತೆ ಆರಂಭಿಸಿದ್ದು, ಸ್ಪೆಶಲ್ ಪೋಸ್ಟರ್ ಸಹ ಸಿದ್ಧಪಡಿಸಲಾಗಿದೆ.

ಜನವರಿ ೨೨ ರಂದು ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬವಿದ್ದು ಅಂದೇ ಸ್ಪೆಶಲ್ ಟೀಸರ್ ರಿಲೀಸ್ ಆಗಲಿದೆ.

ವಿಜಯ್ ಕುಮಾರ್‌ಕೊಂಡ ನಿರ್ದೇಶನದ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದ್ದು, ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ.