ಬಿಡುಗಡೆಗೆ ಸಿದ್ಧವಾಗಿರೋ ಚಿತ್ರವನ್ನು ಎಷ್ಟು ದಿನ ಅಂತ ಬಚ್ಚಿಟ್ಟುಕೊಳ್ಳೋದು ಹೀಗಾಗಿ ಸ್ಯಾಂಡಲ್ ವುಡ್ ನಲ್ಲಿ ಒಂದೊಂದೆ ಸಿನಿಮಾಗಳು ಭಾರಿ ನೀರಿಕ್ಷೆಯೊಂದಿಗೆ ತೆರೆಗೆ ಬರಲು ಸಿದ್ಧವಾಗ್ತಿದೆ.

ಸ್ಯಾಂಡಲ್ ವುಡ್ ಸ್ಟಾರ್ ಗಳ ಅಬ್ಬರಕ್ಕೆ ಕಡಿವಾಣ ಹಾಕಿದ್ದ ಕೊರೋನಾ ವೈರಸ್ ಫುಲ್ ರಿಲೀಫ್ ಕೊಡೋ ಲಕ್ಷಣವೇ ಇಲ್ಲ. ಹೀಗಾಗಿ ಒಂದೊಂದೆ ಸ್ಟಾರ್ ಚಿತ್ರಗಳು ಥಿಯೇಟರ್ ಗೆ ಬರೋ ಟೈಂ ಡೇಟ್ ಫಿಕ್ಸ್ ಆಗ್ತಿದೆ.

ಯುವರತ್ನ ರಿಲೀಸ್ ಗೆ ಏಪ್ರಿಲ್ ನಲ್ಲಿ ಮುಹೂರ್ತ ಫಿಕ್ಸ್ ಆಗಿದ್ದರೇ,ಪೊಗರು ಜನವರಿ ಅಂತ್ಯ ಅಥವಾ ಫೆ.ಮೊದಲ ವಾರದಲ್ಲಿ ತೆರೆಗೆ ಬರಲಿದೆ ಅಂತ ಹೇಳಲಾಗ್ತಿದೆ.

ಈ ಕುರಿತು ನಿರ್ದೇಶಕ ನಂದಕಿಶೋರ್ ಖಚಿತ ಮಾಹಿತಿ ನೀಡಬೇಕಿದೆ. ಪೊಗರು ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದ್ದು ಈಗಾಗಲೆ ಬಿಡುಗಡೆಯಾಗಿರುವ ತಮಿಳು,ತೆಲುಗು ಪೋಸ್ಟರ್ ಗಳು ಮನಸೆಳೆಯುವಂತಿದೆ.

ಈಗಾಗಲೇ ಚೈನೈಗೆ ತೆರಳಿ ವಿತರಕರ ಜೊತೆಗೆಲ್ಲ ಮಾತುಕತೆ ಮುಗಿಸಿ ಬಂದಿರುವ ನಿರ್ದೇಶಕ ನಂದ್ ಕಿಶೋರ್ ಹಾಗೂ ನಟ ಧ್ರುವ್ ಸರ್ಜಾ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಜನವರಿ 29 ಅಥವಾ ಫೆ.5 ರಂದು ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ. ತಮಿಳಿನಲ್ಲಿ ಧ್ರುವ್ ಸರ್ಜಾ ಮೊದಲ ಚಿತ್ರವಾಗಿದ್ದು ಸರ್ಜಾ ಮನೆತನದ ಕುಡಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

ಈಗಾಗಲೇ ಪೊಗರು ಚಿತ್ರೀಜರಣ ಮುಗಿಸಿ ದುಬಾರಿ ಚಿತ್ರೀಕರಣಕ್ಕೆ ಧುಮುಕಿರುವ ಧ್ರುವ್ ಸರ್ಜಾ ಈ ಚಿತ್ರದ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ.ತಮಿಳುನಾಡಿನಲ್ಲಿ ಚಿತ್ರ ಮಂದಿರ ಗಳಲ್ಲಿ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದ್ದು ಭಾರಿ ಬಜೆಟ್ ಚಿತ್ರಗಳು ರಿಲೀಸ್ ಆಗ್ತಿವೆ.ಹೀಗಾಗಿ ಕರ್ನಾಟಕದಲ್ಲೂ ಇದೇ ಬೆಳವಣಿಗೆಗಾಗಿ ಚಿತ್ರರಂಗ ಕಾಯ್ತಿದ್ದು ಇದನ್ನು ನೋಡಿಕೊಂಡು ನಂದ ಕಿಶೋರ್ ರಿಲೀಸ್ ಡೇಟ್ ಫೈನಲ್ ಮಾಡೋ ಸಾಧ್ಯತೆ ಇದೆ.