ಕಾರು,ಬೈಕ್ ಅಲ್ಲ…..! ಇದು ಐಷಾರಾಮಿ ಕೋಣ…! ಬೆಲೆ 9.5 ಕೋಟಿ….!!

ಜನರು ಕೋಟಿಗಟ್ಟಲೇ ವ್ಯಯಿಸಿ ತಮ್ಮಿಷ್ಟದ ಕಾರ್,ಬೈಕ್ ತಗೊಳ್ಳೋದನ್ನು ನೋಡ್ತಿರಾ. ಆದರೆ ಈ ರೈತ ಮಾತ್ರ ಅದಕ್ಕೆಲ್ಲ ಹಣ ಖರ್ಚು ಮಾಡಿಲ್ಲ.‌ಬದಲಾಗಿ 9.5 ಕೋಟಿ ಬೆಲೆಬಾಳೋ ಕೋಣವನ್ನು ಸಾಕಿ ವಿಶ್ವದ ಗಮನ ಸೆಳೆದಿದ್ದಾನೆ.


ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಗಡಿಯಲ್ಲಿರೋ ಚಿತ್ರಕೂಟದ ಗ್ರಾಮೋದಯ ಮೇಳದಲ್ಲಿ ಗಮನ ಸೆಳೆತಿರೋ ಯುವರಾಜ್ ಹೆಸರಿಗೆ ತಕ್ಕಂತೆ ರಾಜ್ ನಂತಿರೋ ಕೋಣ.

ಇದರ ದಿನದ ಆಹಾರ 20 ಲೀ ಹಾಲು, 10 ಕೆಜಿ ಹಣ್ಣು ಅದರಲ್ಲೂ 5 ಕೆಜಿ ಆ್ಯಪಲ್, ತಲಾ 5 ಕೆಜಿ ಹಸಿ ಮತ್ತು ಒಣ ಹುಲ್ಲು,ಹಿಂಡಿ. ಅಂದಾಜು 3000 ರೂಪಾಯಿ ಯುವರಾಜ್ ನ ಒಂದು ದಿನದ ಖರ್ಚು.

ಹರಿಯಾಣದ ಕುರುಕ್ಷೇತ್ರದ ನಿವಾಸಿ ಕರಮವೀರ್ ಸಿಂಗ್ ಇದರ ಮಾಲೀಕ. ಈತ ಪ್ರತಿವರ್ಷ ಈ ಕೋಣದಿಂದ ಅಂದಾಜು 50 ಲಕ್ಷ ಆದಾಯ ಪಡೆಯುತ್ತಿದ್ದು, ಅದನ್ನು ಬಳಸಿಕೊಂಡು ತನ್ನ ಹೈನುಗಾರಿಕೆ ಉದ್ಯಮವನ್ನು ವಿಸ್ತರಿಸಿದ್ದಾನೆ.ಜನರು ಮ್ಯೂಸಿಮ್ ಗಳಲ್ಲಿ ಕಾರ್,ಬೈಕ್ ನೋಡಲು ಹೋಗುವಂತೆ ಪ್ರತಿನಿತ್ಯ ಯುವರಾಜ್ ನ ದರ್ಶನಕ್ಕೆ ಆಗಮಿಸುತ್ತಾರೆ.

ಪ್ರತಿನಿತ್ಯ ೫ ಕಿಲೋಮೀಟರ್ ವಾಕ್ ಮಾಡುವ ಯುವರಾಜ್, ಅಜಾನುಬಾಹು. 11.5 ft ಅಗಲ,5.8 ft ಎತ್ತರ ಇರುವ ಯುವರಾಜ್ ಬರೋಬ್ಬರಿ 1500 kg ತೂಗುತ್ತಾನೆ. ಮಿರ‌ಮಿರ ಮಿಂಚುವ ಕಪ್ಪು ಬಣ್ಣದಲ್ಲಿ ಕಂಗೊಳಿಸುತ್ತ ಜಾನುವಾರ ಪ್ರಿಯರಿಗೆ ಇಷ್ಟವಾಗುತ್ತಾನೆ.

ನೀರುಕೋಣದ ಸಂತತಿಗೆ ಸೇರಿರುವ ಈ ಮುರ್ರಾ ಜಾತಿಯ ಕೋಣ ಯುವ ರಾಜ್ ನ ಸಂತತಿಯನ್ನು ಮುಂದುವರೆಸಲು ರೈತರು, ಕೃಷಿಕರು ತುದಿಗಾಲಲ್ಲಿ ನಿಂತಿದ್ದು ಯುವರಾಜ್ ನ ಸ್ಪರ್ಮ್ ಡೋಸ್ ನೆ ಲೆಕ್ಕಾಚಾರದಲ್ಲಿ ಮಾರಾಟವಾಗುತ್ತದೆ.

ಯುವರಾಜ್ ನ ವೀರ್ಯ ಮಾರಾಟದಿಂದಲೇ ಕರಮವೀರ್ ಸಿಂಗ್ ಹೆಚ್ಚಿನ ಅದಾಯ ಗಳಿಸುತ್ತಿದ್ದು, 500 ಡೋಸ್ ನಷ್ಟು ಮಾರಾಟಮಾಡಲಾಗುತ್ತದೆ. ಇದುವರೆಗೂ 1.5 ಲಕ್ಷದಷ್ಟು ಕರುಗಳಿಗೆ ತಂದೆಯಾದ ಖ್ಯಾತಿಯೂ ಯುವರಾಜ್ ಗಿದೆ.ಕರಮವೀರ್ ಸಿಂಗ್ ಪಾಲಿಗೆ ಯುವರಾಜ್ ಕೋಣವಲ್ಲ.‌ಬದಲಾಗಿ ತಮ್ಮ ಮಗನಿಗಿಂತ ಹೆಚ್ಚು. ಒಂದು ರೀತಿಯ ಪ್ರತಿಷ್ಟೆಯಂತೆ ಬೆಳೆಸಿಕೊಂಡು ಬಂದಿರುವ ಈ ಯುವರಾಜ್ ಬೆಲೆ ಬರೋಬ್ಬರಿ 9.5 ಕೋಟಿ.

Comments are closed.