ರಾಜ್ಯದಲ್ಲಿ ಕ್ಷಣಕ್ಕೊಂದು,ದಿನಕ್ಕೊಂದು ಸಿಡಿ,ವಿಡಿಯೋ ಬಿಡುಗಡೆಯಾಗುತ್ತಿದ್ದು,ಆ ವಿಚಾರದಲ್ಲಿ ಮಹಾನಾಯಕನ ಪಾತ್ರದ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಹೀಗಿರುವಾಗಲೇ ಮಹಾನಾಯಕ ಪದ ಬಳಕೆಗೆ ಸ್ಯಾಂಡಲ್ ವುಡ್ ವಿರೋಧ ವ್ಯಕ್ತವಾಗಿದೆ.

ಸ್ಯಾಂಡಲ್ ವುಡ್ ನಟ ಹಾಗೂ ಬಿಗ್ ಬಾಸ್ ವಿನ್ನರ್ ಪ್ರಥಮ ಸಿಡಿ ಪ್ರಕರಣದಲ್ಲಿ ಮಹಾನಾಯಕ ಪದಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸೋಷಿಯಲ್‌ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಒಳ್ಳೆಹುಡುಗ ಪ್ರಥಮ್, ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಗೆ ಗೌರವದಿಂದ ಮಹಾನಾಯಕ ಅಂತಿದ್ರು. ಈಗ ಸಿಡಿಮಾಡೋರನ್ನ ಮಹಾನಾಯಕ ಅಂತಿದ್ದಾರೆ.

ಯಾವ ಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಠ ಜ್ಞಾನ ಬೇಡವಾ ನಿಮಗೆ. ಅಂಬೇಡ್ಕರ್ ಪೋಟೋ ವಿರೂಪಗೊಂಡರೆ ಅವಮಾನ ಮಾಡಿದಂತಲ್ಲ. ಅಶ್ಲೀಲ ಸಿಡಿ ಕೇಸ್‌ನಲ್ಲಿ ಮಹಾನಾಯಕ ಪದಬಳಕೆ ಮಾಡಿದರೇ ಅವರಿಗೆ ಅವಮಾನ ಮಾಡಿದಂತೆ ಎಂದಿದ್ದಾರೆ.
ಅಷ್ಟೇ ಅಲ್ಲ ಇನ್ನೊಮ್ಮೆ ಯಾರಾದರೂ ಮಹಾನಾಯಕಪದಬಳಕೆ ಮಾಡಿದರೆ ಮುಖಕ್ಕೆ ಉಗಿರಿ ಎಂದು ಪ್ರಥಮ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ನಮ್ಮ ಜನಕ್ಕೆ ಯಾವುದನ್ನು ವಿರೋಧಿಸಬೇಕೆಂಬ ಕನಿಷ್ಠ ಜ್ಞಾನ ಇಲ್ಲ ಎಂದು ಪ್ರಥಮ್ ಜನರ ವಿರುದ್ಧವೂ ಹರಿಹಾಯ್ದಿದ್ದಾರೆ. ಅಲ್ಲದೇ ಸಿಡಿ ಪ್ರಕರಣದಲ್ಲಿ ಇನ್ಮುಂದೆ ಮಹಾನಾಯಕ ಪದಬಳಕೆ ಮಾಡಿ ಅಂಬೇಡ್ಕರ್ ಗೆ ಅವಮಾನ ಮಾಡೋದು ಬೇಡ ಎಂದು ಪ್ರಥಮ್ ಮನವಿ ಮಾಡಿದ್ದಾರೆ.