ಕೊರೋನಾ ಎಫೆಕ್ಟ್…! ರಾಬರ್ಟ್ ವಿಜಯ ಯಾತ್ರೆ ಮುಂದೂಡಿದ ದಚ್ಚು…!!

ಕೊರೋನಾ ಬಳಿಕ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸಖತ್ ರೆಸ್ಪಾನ್ಸ್ ಪಡೆದಿದೆ.ಬಾಕ್ಸಾಫೀಸ್ ಕೊಳ್ಳೆ ಹೊಡೆದು  100 ಕೋಟಿ ಕ್ಲಬ್ ಸನಿಹದಲ್ಲಿರುವ ಚಿತ್ರದ ಯಶಸ್ಸಿಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗಿದೆ.  ಆದರೆ  ರಾಬರ್ಟ್ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಸಿದ್ಧವಾಗಿದ್ದ ದಚ್ಚುಗೆ ಮಾತ್ರ ಕೊರೋನಾ ಅಡ್ಡಿಯಾಗಿದೆ.  

 ರಾಬರ್ಟ್ ಅದ್ಭುತ್ ಯಶಸ್ಸಿನಿಂದ ಖುಷಿಯಾಗಿದ್ದ ಚಿತ್ರತಂಡ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ರಾಬರ್ಟ್ ಸಕ್ಸಸ್ ಮೀಟ್ ನಡೆಸಲು ಸಿದ್ಧವಾಗಿತ್ತು. ಅದ್ದೂರಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಸಿದ್ಧವಾಗಿದ್ದ ಚಿತ್ರತಂಡ ಅದಕ್ಕಾಗಿ ಟೈಂಟೇಬಲ್ ಕೂಡ ಸಿದ್ಧಪಡಿಸಿತ್ತು.

ಆದರೆ ಕೊರೋನಾ ಎರಡನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಬರ್ಟ್ ಸಕ್ಸಸ್ ಯಾತ್ರೆ ಮುಂದೂಡಲು ಚಿತ್ರತಂಡ ನಿರ್ಧರಿಸಿದೆ. ಸರ್ಕಾರವೂ ಕೂಡ ಕೊರೋನಾ ನಿಯಂತ್ರಣಕ್ಕೆ ನಿಯಮ ಬಿಗಿಗೊಳಿಸಿದ್ದು, ಸಾವಿರಾರು ಜನ ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿದೆ.

ಹೀಗಾಗಿ ರಾಬರ್ಟ್ ಚಿತ್ರತಂಡ ಕಾರ್ಯಕ್ರಮ ಮುಂದೂಡಿದ್ದು, ಈ ಬಗ್ಗೆ ಸ್ವತಃ ನಟ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.  ನೀವು ನಮ್ಮ ಸಿನಿಮಾಕ್ಕೆ ಅದ್ಭುತ ರೆಸ್ಪಾನ್ಸ್ ನೀಡಿ ಗೆಲ್ಲಿಸಿದ್ದೀರಿ. ಅದಕ್ಕಾಗೆ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬರಲು ನಾವು ಸಿದ್ಧತೆ ನಡೆಸಿದ್ದವು. ಆದರೆ ಕೊರೋನಾ ಎರಡನೇ ಅಲೆ ಕಾರಣಕ್ಕೆ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದು ಕಷ್ಟವಾಗಿದೆ. ಅಲ್ಲದೇ ನಿಮ್ಮಆರೋಗ್ಯ ನಮ್ಮ ಮತ್ತು ಸರ್ಕಾರದ ಆದ್ಯತೆ.

ಹೀಗಾಗಿ ದಯಮಾಡಿ ಮಾಸ್ಕ್ ಧರಿಸಿ, ಮನೆಯಲ್ಲೇ ಇರಿ. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ನಿಮ್ಮೂರಿಗೆ ಬರುತ್ತೇವೆ . ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ, ನಿಮ್ಮ ಪ್ರೀತಿಯ ದಾಸ ಎಂದು ದರ್ಶನ್ ಬರೆದುಕೊಂಡಿದ್ದಾರೆ. ಪ್ರಸ್ತುತ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಿನಿಮಾ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರವೂ ನಿರ್ಧರಿಸಿದೆ.

ಯುವರತ್ನ ಸಿನಿಮಾ ತಂಡ ನಡೆಸಿದ ಅದ್ದೂರಿ ಕಾರ್ಯಕ್ರಮಗಳಿಂದ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ರಾಬರ್ಟ್ ಸಿನಿಮಾ ತಂಡ ತನ್ನಜಿಲ್ಲಾ ಭೇಟಿ ಮುಂದೂಡಿದೆ. ಇದೇ 29 ರಿಂದ ರಾಬರ್ಟ್ ವಿಜಯಯಾತ್ರೆ ತುಮಕೂರಿನಿಂದ ಆರಂಭವಾಗಬೇಕಿತ್ತು.

Comments are closed.