ಭಾನುವಾರ, ಏಪ್ರಿಲ್ 27, 2025
HomeBreakingನಿಮ್ಮ ಸಂಕಷ್ಟದಲ್ಲಿ ಭಾಗಿಯಾಗದಂತ ಸ್ಥಿತಿಗೆ ಕ್ಷಮೆ ಕೋರುವೆ...! ಮಾಲಾಶ್ರೀಗೆ ಜಗ್ಗೇಶ್ ಸಾಂತ್ವನ...!!

ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗದಂತ ಸ್ಥಿತಿಗೆ ಕ್ಷಮೆ ಕೋರುವೆ…! ಮಾಲಾಶ್ರೀಗೆ ಜಗ್ಗೇಶ್ ಸಾಂತ್ವನ…!!

- Advertisement -

ಕನ್ನಡದ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾಕ್ಕೆ ಬಲಿಯಾಗಿದ್ದಾರೆ. ರಾಮು ಕಳೆದುಕೊಂಡ ಮಾಲಾಶ್ರೀ ಹಾಗೂ ಮಕ್ಕಳಿಗೆ ಸಿನಿರಂಗದ ಹಲವರು ಸಾಂತ್ವನ ಹೇಳಿದ್ದು, ಜಗ್ಗೇಶ್ ನಿಮ್ಮ ಕಷ್ಟದಲ್ಲಿ ಭಾಗಿಯಾಗದ ಸ್ಥಿತಿಗೆ ಕ್ಷಮೆ ಇರಲಿ ಎಂದಿದ್ದಾರೆ.

ಕನ್ನಡದ ಹಿರಿಯ ನಟ ಜಗ್ಗೇಶ್ ರಾಮು ನಿಧನದ ಬಳಿಕ ನಟಿ ಮಾಲಾಶ್ರೀಗೆ ಸಾಂತ್ವನ ಹೇಳಿದ್ದು, ಮೇಡಂ‌ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗುವ ಯೋಗ ಇಲ್ಲದಂತೆ ಮಾಡಿದ ಈ ಸಮಯಕ್ಕೆ ಕ್ಷಮೆ ಕೋರುವೆ ಎಂದಿದ್ದಾರೆ.

ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿ ಮಾತ್ರ ಉಳಿದಿದೆ.ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದಿದ್ದಾರೆ ಜಗ್ಗೇಶ್.

ಅಷ್ಟೇ ಅಲ್ಲ ರಾಮು ಮತ್ತೆ ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡುತ್ತೇನೆ. ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ.ಮಕ್ಕಳನ್ನು ರಾಮು ಎತ್ತರಕ್ಕೆ ಬೆಳೆಸಿ. ನಿಮ್ಮ ಜೊತೆ ನಾವು ಉದ್ಯಮದ ಸ್ನೇಹಿತರು ಇರುತ್ತೇವೆ ಎಂದಿದ್ದಾರೆ.

ಏಪ್ರಿಲ್ ೨೬ ರಂದು ತೀವ್ರ ಉಸಿರಾಟದ ತೊಂದರೆಯಿಂದ ನಿರ್ಮಾಪಕ ರಾಮು ನಿಧನರಾಗಿದ್ದರು. ಕೊರೋನಾದಿಂದ ನಿಧನರಾದ ಹಿನ್ನೆಲೆಯಲ್ಲಿ ಸಿನಿಗಣ್ಯರಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರಲಿಲ್ಲ.

ಹೀಗಾಗಿ‌ಚಿತ್ರರಂಗದ ನಟ-ನಟಿಯರಾದ ಶೃತಿ,ಪುನೀತ್ ರಾಜಕುಮಾರ, ಶಿವರಾಜ್ ಕುಮಾರ್,ಮಾಳವಿಕ್ ಅವಿನಾಶ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

Most Popular