ರಮ್ಯ-ರಕ್ಷಿತಾ ನಡುವೆ ಮರೆಯದ ಸ್ನೇಹ…! ರಕ್ಷಿತಾ ಬರ್ತಡೇಗೆ ರಮ್ಯ ಕೊಟ್ಟ ಗಿಫ್ಟ್ ಏನ ಗೊತ್ತಾ?!

ಸ್ಯಾಂಡಲ್ ವುಡ್ ನಟಿಯರಲ್ಲಿ ಒಂದು ಕಾಲದಲ್ಲಿ ಚಂದನವನವನ್ನು ಆಳಿದವರು ರಮ್ಯ ಹಾಗೂ ರಕ್ಷಿತಾ. ಸದ್ಯ ಇಬ್ಬರೂ ನಟನೆಯಿಂದ ದೂರ ಉಳಿದಿದ್ದರೂ ಸ್ನೇಹದಿಂದ ದೂರವಾಗಿಲ್ಲ. ಅದಕ್ಕೆ ಸಾಕ್ಷಿ ರಕ್ಷಿತಾ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿಕೊಂಡಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯ ಕಳುಹಿಸಿದ ಸ್ಪೆಶಲ್ ಗಿಫ್ಟ್.

ಇತ್ತೀಚಿಗಷ್ಟೇ ಕ್ರೇಜಿಕ್ವಿನ್ ರಕ್ಷಿತಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. 2000 ರಲ್ಲಿ ಚಿತ್ರರಂಗಕ್ಕೆ ಬಂದು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಮೆರೆದಿದ್ದ ರಕ್ಷಿತಾ ಹುಟ್ಟುಹಬ್ಬಕ್ಕೆ ದರ್ಶನ್, ರಮ್ಯ ಸೇರಿದಂತೆ ಎಲ್ಲರೂ ಪ್ರೀತಿಯಿಂದ ಹಾರೈಸಿದ್ದರು.

ಅದರಲ್ಲೂ ಮಾಜಿಸಂಸದೆ ರಮ್ಯ ನನ್ನ ಸಿನಿಜರ್ನಿ ನಿನ್ನೊಂದಿಗಿನ ನೆನಪುಗಳಿಲ್ಲದೇ ಪೂರ್ಣಗೊಳ್ಳೋದೆ ಇಲ್ಲ ಎಂದಿದ್ದರು.

ಸಾಕಷ್ಟು ಸಿನಿನೆನಪು, ನಾಟಕಗಳಿಂದ ಕೂಡಿದ ನಮ್ಮ ಸಿನಿ ಜರ್ನಿ ನೆನಪಿಸಿಕೊಳ್ಳುತ್ತೇನೆ. ಹಾಗೂ ನಿನಗೆ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ ಎಂದಿದ್ದ ರಮ್ಯ , 2000 ಕಾಲದಲ್ಲಿ ರಮ್ಯ ಹಾಗೂ ರಕ್ಷಿತ್ ಒಟ್ಟಾಗಿ ತೆಗೆಸಿಕೊಂಡಿದ್ದ ಪೋಟೋವೊಂದನ್ನು ಶೇರ್ ಮಾಡಿದ್ದರು.

ಹುಟ್ಟುಹಬ್ಬದ ಬಳಿಕ ರಮ್ಯ ರಕ್ಷಿತಾಗೆ ಸ್ಪೆಶಲ್ ಗಿಫ್ಟ್ ವೊಂದನ್ನು ಪ್ರೀತಿಯ ಪತ್ರದೊಂದಿಗೆ ಕಳುಹಿಸಿದ್ದು, ಇದು ಇಬ್ಬರೂ ಸ್ಟಾರ್ ನಟಿಯರ ನಡುವಿನ ಸ್ನೇಹಕ್ಕೆ ಸಾಕ್ಷಿ ಒದಗಿಸುತ್ತಿದೆ. ರಮ್ಯ ಗೆಳತಿ ರಕ್ಷಿತಾಗಾಗಿ ಸೀರೆಯೊಂದನ್ನು ಕಳುಹಿಸಿದ್ದು, ಅದರೊಂದಿಗೆ ಈ ಸೀರೆ ನಿನಗೆ ಇಷ್ಟವಾಗುತ್ತದೆ ಮತ್ತು ನೀನು ಇದನ್ನು ಉಟ್ಟುಕೊಳ್ಳುತ್ತೀಯಾ ಎಂದು ಭಾವಿಸಿದ್ದೇನೆ. ನಿನ್ನೊಂದಿಗಿನ ನೆನಪಿಗೆ ಧನ್ಯವಾದ ಎಂದಿದ್ದಾರೆ.

ರಮ್ಯ ಕಳುಹಿಸಿದ ಪ್ರೀತಿಯ ಗಿಫ್ಟ್ ನ್ನು ರಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಗಿಫ್ಟ್ ತುಂಬ ಇಷ್ಟವಾಯಿತು. ಪ್ರೀತಿಗೆ ಧನ್ಯವಾದ.

ಹೌದು ನೀನಿಲ್ಲದೇ ನನ್ನ ಸಿನಿಜರ್ನಿ ಅಪರಿಪೂರ್ಣ ಎಂದು ಹಾರ್ಟ್ ಇಮೋಜಿ ಹಾಕಿದ್ದಾರೆ. ಈ ನಟಿಯರ ಪ್ರೀತಿಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವಂತಾಗಲಿ ಅಂತ ಕಮೆಂಟ್ ಮಾಡ್ತಿದ್ದಾರೆ.

Comments are closed.