ವರ್ಲ್ಡ್ ಫೇಮಸ್ ನಟ ಮತ್ತು ನಿರ್ದೇಶಕರ ಜೊತೆ ಒಂದು ಸಿನಿಮಾ ಮಾಡಬೇಕು….?! ರಶ್ಮಿಕಾ ಕನಸಿನ ಸಿನಿಮಾ ಯಾವುದು ಗೊತ್ತಾ…?!

ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಹಾಲಿವುಡ್,ಬಾಲಿವುಡ್ ವರೆಗೂ ಹೆಸರು ಗಳಿಸಿದ ಸಿನಿಮಾ ಕೆಜಿಎಫ್. ತೆರೆಗೆ ಬರಲು ಸಿದ್ಧವಾಗಿರೋ ಕೆಜಿಎಫ್-2 ವಿದೇಶದಲ್ಲೂ ರಿಲೀಸ್ ಆಗೋ ಮೂಲಕ ಕನ್ನಡದ ಗೌರವ ಎತ್ತಿಹಿಡಿಯಲಿದೆ. ಹೀಗೆ ಸ್ಯಾಂಡಲ್ ವುಡ್ ನ್ನು ಎತ್ತರಕ್ಕೆ ಕೊಂಡೊಯ್ದು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೊತೆ ಸಿನಿಮಾ ಮಾಡೋಕೆ ಯಾರಿಗೆ ಇಷ್ಟ ಇರಲ್ಲ ಹೇಳಿ.

ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೊತೆ ಒಂದು ಸಿನಿಮಾದಲ್ಲಿ ನಟಿಸೋಕೆ ಸಿಕ್ಕರೆ ಸಾಕಪ್ಪಾ ಅನ್ನೋ ಟ್ರೆಂಡ್ ನಿಧಾನಕ್ಕೆ ಬಲಗೊಳ್ಳುತ್ತಿರುವಾಗಲೇ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತಾವು ಕೂಡ ಈ ಸಾಲಿನಲ್ಲೇ ಇರೋದಾಗಿ ಧೈರ್ಯವಾಗಿ ಹೇಳಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ಮತ್ತು ಯಶ್ ಸರ್ ಹಾರ್ಡ್ ವರ್ಕ್ ನಿಂದ ಕೆಜಿಎಫ್ ಸಿದ್ಧವಾಗಿದೆ. ಇವರ ಶ್ರಮದಿಂದ ಬೇರೆ ಸಿನಿಇಂಡಸ್ಟ್ರಿಗಳು ಕನ್ನಡದ ಬಗ್ಗೆ ಮಾತನಾಡುವಂತಾಗಿದೆ. ನೋಡೋಕೆ-ಕೇಳೋಕೆ ಖುಷಿಯಾಗುತ್ತದೆ. ನನಗೂ ಅವರ ಜೊತೆ ಒಂದು ಸಿನಿಮಾ ಮಾಡಬೇಕೆಂಬ ಕನಸಿದೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.

ಸಧ್ಯ ಸಾಲು-ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಕೂಡ ಸ್ಯಾಂಡಲ್ ವುಡ್ ನಿಂದ ಟಾಲಿವುಡ್, ಬಾಲಿವುಡ್ ಗೆ ಹಾರಿದ್ದು, ಬಿಗ್ ಬಿ ಅಮಿತಾಬ್ ಬಚ್ಛನ್ ಜೊತೆ ಕೂಡ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಹಿಂದಿಯ ಅಲ್ಬಂ ಸಾಂಗ್ ನಲ್ಲೂ ನಟಿಸಿರುವ ರಶ್ಮಿಕಾ ಮಂದಣ್ಣ ಸಧ್ಯಕ್ಕೆ ಫುಲ್ ಬ್ಯುಸಿ.

ಟಾಲಿವುಡ್, ಬಾಲಿವುಡ್ ಎಲ್ಲೇ ಹೋದರು ಸ್ಯಾಂಡಲ್ ವುಡ್ ಮನೆ ಇದ್ದಂತೆ.ಇಲ್ಲಿಗೆ ಬರಲೇಬೇಕಲ್ಲ ಎಂದಿರುವ ರಶ್ಮಿಕಾ ಮಂದಣ್ಣ ಪ್ರಶಾಂತ್ ನೀಲ್ ಮತ್ತು ಯಶ್ ಜೊತೆ ನಟಿಸೋ ಅವಕಾಶಕ್ಕಾಗಿ ಕಾಯ್ತಿರೋದಾಗಿ ನೇರವಾಗಿ ಹೇಳಿಕೊಳ್ಳೋ ಮೂಲಕ ಚಿತ್ರರಂಗ ಹುಬ್ಬೇರಿಸುವಂತೆ ಮಾಡಿದ್ದಾರೆ.

ಸಿನಿಮಾ ಇಂಡಸ್ಟ್ರಿಗಳ ನಡುವೆ ಕಂಡು-ಕಾಣದಂತೆ ಇದ್ದ ಅಂತರವನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಕೆಜಿಎಫ್ ಯಶಸ್ವಿಯಾಗಿದ್ದು, ಇದಕ್ಕೆ ಪ್ರಶಾಂತ್ ನೀಲ್ ಅವರ ಹಾರ್ಡ್ ವರ್ಕ್ ಹಾಗೂ ಶ್ರಮ ಕಾರಣ ಅನ್ನೋದನ್ನು ರಶ್ಮಿಕಾ ಮುಕ್ತವಾಗಿ ಹಾಡಿಹೊಗಳಿದ್ದಾರೆ.

ಒಟ್ಟಿನಲ್ಲಿ ಪೊಗರು ಬಳಿಕ ಸ್ಯಾಂಡಲ್ ವುಡ್ ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳದೇ ಒಂದು ರೀತಿ ಅಂತರ ಕಾಯ್ದುಕೊಂಡಿದ್ದ ರಶ್ಮಿಕಾ ಮತ್ತೆ ಕನ್ನಡಕ್ಕೆ ಬರೋ ಮನಸ್ಸು ಮಾಡಿದ್ದಂತಿದ್ದು, ಯಶ್ ಜೊತೆ ನಟಿಸುವ ಅವಕಾಶಕ್ಕೆ ಕಾದಿರುವಂತಿದೆ.

Comments are closed.