ಕನ್ನಡ-ತೆಲುಗಿನಲ್ಲಿ ರಾಬರ್ಟ್ ಹವಾ…! ಮೂರೇ ದಿನಕ್ಕೆ ಬರೋಬ್ಬರಿ 50 ಕೋಟಿ ಗಳಿಕೆ….!!

ಕೊರೋನಾ ಸಂಕಷ್ಟದ ಬಳಿಕ ರಿಲೀಸ್ ಆದ ರಾಬರ್ಟ್ ಚಂದನವನದಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದು, ರಿಲೀಸ್ ಆದ ನಾಲ್ಕೇ ದಿನಕ್ಕೆ ದರ್ಶನ್ ನಟನೆಯ ಚಿತ್ರ ಬರೋಬ್ಬರಿ 50 ಕೋಟಿ ಕಲೆಕ್ಷನ್ ದಾಖಲಿಸಿದೆ.

ಕೊರೋನಾ ಸಂಕಷ್ಟದ ಬಳಿಕ ತೆರೆಗೆ ಬಂದ ಮೊದಲ ಬಹುನೀರಿಕ್ಷಿತ ಚಿತ್ರ ಪೊಗರು. ಆ ಬಳಿಕ ತೆರೆಗೆ ಬಂದ ಬಾಕ್ಸಾಪೀಸ್ ಸುಲ್ತಾನ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.  ಮಾರ್ಚ್ 11 ರ ಶಿವರಾತ್ರಿಯಂದು ತೆರೆಕಂಡ ರಾಬರ್ಟ್ ಈಗಾಗಲೇ 50 ಕೋಟಿ ಹಣ ಗಳಿಸಿದೆ.

ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಂಡ ರಾಬರ್ಟ್ ಕನ್ನಡದಲ್ಲಿ ಮೊದಲನೇ ದಿನವೇ 2 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನಕಂಡಿದ್ದು, ಬರೋಬ್ಬರಿ 17.24 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ 12.28 ಕೋಟಿ, ಮೂರನೇ ದಿನ 14.10 ಕೋಟಿ ಆದಾಯ ಗಳಿಸಿದೆ ರಾಬರ್ಟ್.

ಇದು ಕನ್ನಡದ ಗಳಿಕೆಯ ಲೆಕ್ಕಾಚಾರವಾದ್ರೆ ತೆಲುಗು ರಾಬರ್ಟ್ ಸೇರಿಸಿದ್ರೆ ಮೂರೇ ದಿನದಲ್ಲಿ ರಾಬರ್ಟ್ ಗಳಿಕೆ 50 ಕೋಟಿ ರೂಪಾಯಿ ದಾಟಿದೆ.  ಕನ್ನಡದಲ್ಲಿ 100 ಕೋಟಿ ಸಂಪಾದಿಸುವ ಚಿತ್ರಗಳು ಬಂದಿದ್ದೇ ಕಡಿಮೆ. ಮೊದಲ ಬಾರಿಗೆ ಕೆಜಿಎಫ್ 100 ಕೋಟಿ ಸಂಪಾದನೆಯ ದಾಖಲೆ ಬರೆದಿತ್ತು.

ಆ ಬಳಿಕ ದರ್ಶನ್ ಮುಖ್ಯಭೂಮಿಕೆಯ ಕುರುಕ್ಷೇತ್ರ ಸಿನಿಮಾ 100 ಕೋಟಿರೂಪಾಯಿ ಗಳಿಸುವ ಮೂಲಕ ಸ್ಯಾಂಡಲ್ ವುಡ್ ನ ಹೆಮ್ಮೆಯ ಸಿನಿಮಾ ಎನ್ನಿಸಿತ್ತು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕೂಡ 100 ಕೋಟಿ ಗಳಿಸುವ ಮುನ್ಸೂಚನೆ ನೀಡಿದೆ.

ಎರಡು ವರ್ಷಗಳ ಬಳಿಕ ವಿಭಿನ್ನ ಗೆಟಪ್ ನಲ್ಲಿ ತೆರೆಗೆ ಬಂದ ಚಾಲೆಂಜಿಂಗ್ ಸ್ಟಾರ್ ನೋಡಲು ಥಿಯೇಟರ್ ನಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದು, ಮೂರು ದಿನದಲ್ಲಿ 50 ಕೋಟಿ ದಾಖಲಿಸಿದ ರಾಬರ್ಟ್ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.  

Comments are closed.