ಭಾನುವಾರ, ಏಪ್ರಿಲ್ 27, 2025
HomeBreakingಕೊರೋನಾಸೋಂಕಿತರಿಗಾಗಿ ಮಿಡಿದ ಸ್ಯಾಂಡಲ್ ವುಡ್ ವಿಲನ್….! ಸ್ವತಃ ಅಂಬ್ಯುಲೆನ್ಸ್ ಚಾಲನೆಗೆ ಮುಂದಾದ ಅರ್ಜುನ್ ಗೌಡ…!!

ಕೊರೋನಾಸೋಂಕಿತರಿಗಾಗಿ ಮಿಡಿದ ಸ್ಯಾಂಡಲ್ ವುಡ್ ವಿಲನ್….! ಸ್ವತಃ ಅಂಬ್ಯುಲೆನ್ಸ್ ಚಾಲನೆಗೆ ಮುಂದಾದ ಅರ್ಜುನ್ ಗೌಡ…!!

- Advertisement -

ಕೊರೋನಾ ಎರಡನೇ ಅಲೆಯ ಸಂಕಷ್ಟ ಕರ್ನಾಟಕದಲ್ಲಿ ಜನರ ಜೀವನವನ್ನೇ ಸಂಕಷ್ಟಕ್ಕೆ ಒಡ್ಡಿದೆ. ಇಂಥ ಹೊತ್ತಿನಲ್ಲಿ ನೆರವಿಗೆ ಬಂದವರೇ ದೇವರಂತೆ ಭಾಸವಾಗುತ್ತಿದ್ದಾರೆ. ಜೀವನ್ಮರಣದ ಹೋರಾಟದಂತಿರುವ  ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟನೊಬ್ಬ ಎಲ್ಲ ಹಮ್ಮುಬಿಮ್ಮು ಬಿಟ್ಟು ಅಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಟ ಅರ್ಜುನ್ ಗೌಡ ಅವರು ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ಸನ್ ಫಿಟ್ನೆಸ್ ಅನ್ನೋ ಜಿಮ್ ಹೊಂದಿದ್ದಾರೆ. ಇದೀಗ ಅಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕೇವಲ ರೋಗಿಗಳನ್ನು ಸಾಗಿಸು ವುದು ಮಾತ್ರವಲ್ಲದೇ, ಮೃತದೇಹ ವನ್ನು ಸಾಗಿಸಲು ನೆರವಾಗುತ್ತಿ ದ್ದಾರೆ. ಅಷ್ಟೇ ಅಲ್ಲ ಕೊರೋನಾ ಸೋಂಕಿತರ ಅಂತಿಮ ವಿಧಿವಿಧಾನ ನೆರವೇರಿಸಲು ಸಹಾಯಹಸ್ತ ಚಾಚಿದ್ದಾರೆ.

ಈಗ ಮಾತ್ರವಲ್ಲ ಇನ್ನೆರಡು ತಿಂಗಳುಗಳ ಕಾಲವೂ ಈ ಅಂಬುಲೆನ್ಸ್ ಸೇವೆಯನ್ನು ಮುಂದುವರೆಸೋದಾಗಿ ಅರ್ಜುನ್ ಗೌಡ ಹೇಳಿದ್ದಾರೆ. ಕೇವಲ ಅಂಬುಲೆನ್ಸ್ ಸೇವೆ ಮಾತ್ರವಲ್ಲ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ಒದಗಿಸಲು ಮುಂದಾಗಿದ್ದಾರೆ.

ಕೊರೋನಾದಂತಹ ಮಾರಕ ರೋಗದ ಹೊತ್ತಿನಲ್ಲಿ ಸ್ವಂತ ಬಂಧು ಗಳೇ ಅಂತರ ಕಾಯ್ದುಕೊಳ್ಳುವಾಗ ತನ್ನ ಸೆಲೆಬ್ರೆಟಿ ಲೈಫ್ ಬದಿಗಿಟ್ಟು ಸೇವೆಗೆ ನಿಂತ ಅರ್ಜುನ್  ಮಾನವೀಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಗೌಡ ಯುವರತ್ನ ಹಾಗೂ ಶಿವರಾಜ್ ಕುಮಾರ್ ನಟನೆಯ ರುಸ್ತುಂ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಳ್ಳೆಯ ನಟನೆಯ ಮೂಲಕವೂ ಭರವಸೆ ಮೂಡಿಸಿದ್ದಾರೆ. ನಟ ಅರ್ಜುನ್ ಗೌಡ ಕೆಲಸಕ್ಕೆ ನಟಿ ರಕ್ಷಿತಾ, ಪನ್ನಗಾಭರಣ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾರ್ಯವನ್ನು ಶ್ಲಾಘಿಸಿದ್ದಾರೆ.

RELATED ARTICLES

Most Popular