ಸೋಮವಾರ, ಏಪ್ರಿಲ್ 28, 2025
HomeBreakingಅನೌನ್ಸ್ ಆಯ್ತು ಹ್ಯಾಟ್ರಿಕ್ ಹಿರೋನ 125 ನೇ ಸಿನಿಮಾ…! ವೇದಗಾಗಿ ಮತ್ತೆ ಜೊತೆಯಾಗ್ತಿದ್ದಾರೆ ಹರ್ಷ-ಶಿವಣ್ಣ …!!

ಅನೌನ್ಸ್ ಆಯ್ತು ಹ್ಯಾಟ್ರಿಕ್ ಹಿರೋನ 125 ನೇ ಸಿನಿಮಾ…! ವೇದಗಾಗಿ ಮತ್ತೆ ಜೊತೆಯಾಗ್ತಿದ್ದಾರೆ ಹರ್ಷ-ಶಿವಣ್ಣ …!!

- Advertisement -

ಹಲವು ಹಿಟ್ ಚಿತ್ರಗಳ ಜೊತೆ ಸ್ಯಾಂಪಲ್‌ ವುಡ್ ನಲ್ಲಿ ೩೫ ವರ್ಷಗಳನ್ನು ಪೊರೈಸಿದ ಸಂಭ್ರಮ ದಲ್ಲಿರೋ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಿವರಾತ್ರಿಯಂದು ತಮ್ಮ ೧೨೫ ಸಿನಿಮಾ ಘೋಷಿಸಿದ್ದಾರೆ‌‌.

ಶಿವರಾಜ್ ಕುಮಾರ್ ೧೨೫ ಸಿನಿಮಾಗೆ ವೇದ್ ಎಂದು ಹೆಸರಿಡಲಾಗಿದ್ದು ಚಿತ್ರದ ಇನ್ನೊಂದು ವಿಶೇಷ ಎಂದರೇ ಶಿವಣ್ಣ ಸ್ವಂತ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಬ್ಯಾನರ್ ಅಡಿಯಲ್ಲಿ ವೇದ ಸಿನಿಮಾ ಸಿದ್ಧವಾಗಲಿದ್ದು ಇದಕ್ಕೆ ಯಶಸ್ವಿ ನಿರ್ದೇಶಕ ಎ.ಹರ್ಷ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಭಜರಂಗಿ, ವಜ್ರಕಾಯ,ಭಜರಂಗಿ-೨ ಬಳಿಕ ಮತ್ತೆ ಮೋಡಿ ಮಾಡಲು ವೇದ ನಲ್ಲಿ ಒಂದಾಗುತ್ತಿದ್ದಾರೆ.ಹರ್ಷ್ ಬಳಿಕ ನರ್ತನ್ ಜೊತೆಗೂ ಶಿವಣ್ಣ ಚಿತ್ರವೊಂದಕ್ಕೆ ಜೈ ಎಂದಿದ್ದು ವೇದ ಬಳಿಕ ಆ ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ.


ಸದ್ಯ ಶಿವಣ್ಣ ಶಿವಪ್ಪ ಚಿತ್ರದಲ್ಲಿ ಬ್ಯುಸಿಯಾಗಿದ್ದು ಇದರ ಬಳಿಕ ವೇದ ಶೂಟಿಂಗ್ ಆರಂಭವಾಗಲಿದೆ.

ಕೊರೋನಾದಿಂದ ಬಾಕಿ ಉಳಿದಿದ್ದ ಭಜರಂಗಿ-೨ ಚಿತ್ರ ಈಗ ರಿಲೀಸ್ ಗೆ ಸಿದ್ದವಾಗಿದ್ದು ಮೇ ೧೪ ರಂದು ಡಾ.ಶಿವರಾಜಕುಮಾರ್ ಭಜರಂಗಿ-೨ ಮೂಲಕ ಪ್ರೇಕ್ಷಕರನ್ನು ರಂಜಿಸಲು ತೆರೆಗೆ ಬರಲಿದ್ದಾರೆ.ವೇದ ಗೆ THE BRUTAL 1960 s ಎಂಬ ಸಬ್ ಟೈಟಲ್ ನೀಡಲಾಗಿದ್ದು ಶಿವರಾಜ್ ಕುಮಾರ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

RELATED ARTICLES

Most Popular