ಪ್ರೇಕ್ಷಕನಿಗೆ ನಿರ್ದೇಶಕನ‌ ಭಾವುಕ ‌ಪತ್ರ…! ರಾಬರ್ಟ್ ಬಗ್ಗೆ ತರುಣ್ ಸುಧೀರ್ ಹೇಳಿದ್ದೇನು ಗೊತ್ತಾ…?!

ಬರೋಬ್ಬರಿ ಎರಡು ವರ್ಷಗಳ ಬಳಿಕ‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರೇಕ್ಷಕ ಪ್ರಭುಗಳಿಗೆ ದರ್ಶನ್ ನೀಡಿದ್ದು ರಾಬರ್ಟ್ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣಲಾರಂಭಿಸಿದೆ.

ಚೌಕ‌ ಚಿತ್ರದಲ್ಲಿ ಪಾತ್ರವಾಗಿ ಬಂದ ರಾಬರ್ಟ್ ನ್ನು ಒಂದು ಚಿತ್ರಕಥೆಯಾಗಿ ಬೆಳೆಸಿ ಪ್ರೇಕ್ಷಕರಿಗೆ ನೀಡಿದ ನಿರ್ದೇಶಕ ತರುಣ್ ಸುಧೀರ್ ಚಿತ್ರದ ರಿಲೀಸ್ ವೇಳೆ ಅಭಿಮಾನಿಗಳಿಗೆ,ಪ್ರೇಕ್ಷಕರಿಗೆ ಭಾವುಕ ಪತ್ರ ಬರೆದು ಗಮನ ಸೆಳೆದಿದ್ದಾರೆ.

ನಿರ್ದೇಶಿಸಿದ ಮೊದಲ ಚಿತ್ರ ಚೌಕದಲ್ಲೇ ಭರವಸೆ‌ ಮೂಡಿಸಿದ್ದ ತರುಣ ಸುಧೀರ್, ತಮಗೆ ಸಿಕ್ಕ ಅದ್ಭುತವಾದ ಅವಕಾಶ ಹಾಗೂ ತಮ್ಮ ಮೇಲೆ ಎಲ್ಲರೂ ಇಟ್ಟ ನಂಬಿಕೆಯನ್ನು ಪತ್ರದಲ್ಲಿ ಸ್ಮರಿಸಿಕೊಂಡಿದ್ದಾರೆ.

ಸಿನಿಮಾ‌ ಎಂಬ ಚೌಕಟ್ಟು ಬಿಟ್ಟು ಬೇರೆನೂ ಗೊತ್ತಿಲ್ಲದವನು ನಾನು. ಕಾಕತಾಳಿಯ ಎಂಬಂತೆ ನನ್ನ ಮೊದಲ ‌ಚಿತ್ರದ‌ ಹೆಸರು ಚೌಕ. ನಿರ್ಮಾಪಕ ಉಮಾಪತಿ ಗೌಡರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ ನನ್ನ ಮೇಲಿಟ್ಟ ಭರವಸೆ ಹಾಗೂ ನಂಬಿಕೆಯಿಂದ ರಾಬರ್ಟ್ ನಿರ್ದೇಶನ ಸಾಧ್ಯವಾಯಿತು.

ಇಂಥಹದೊಂದು ಚಿತ್ರವನ್ನು ಯಾವುದೇ ಭಯವಿಲ್ಲದೇ ನಿರ್ದೇಶಿಸಲು ಸಾಧ್ಯ ವಾಗಿದ್ದು ನನ್ನ ತಂತ್ರಜ್ಞರ ಸಹಾಯದಿಂದ. ಬಂಡೆಯಂತೆ‌ ನಿಂತ ತಂತ್ರಜ್ಞರು ಹಾಗೂ ನನ್ನ ತಂಡದ‌ ಸಹಾಯ,ಪರಿಶ್ರಮದಿಂದ ಇಂದು ರಾಬರ್ಟ್ ಎಂಬ ಕೂಗು ಎಲ್ಲ ದಿಕ್ಕಿನಲ್ಲೂ ಪ್ರತಿಧ್ವನಿಸಲು ಸಾಧ್ಯವಾಯಿತು.

ನಾನು ಚಿತ್ರಕತೆ, ನಿರ್ದೇಶನ ಮಾಡಿದ್ದು, ಸಂಗೀತ ಹಾಡಿಸಿದ್ದು ಡೈಲಾಗ್ ಹೊಡೆಸಿದ್ದು ಪೈಟ್ ಮಾಡಿಸಿದ್ದು ಎಲ್ಲದೂ ನಿಮಗಾಗಿ. ಮಗು ಕುಣಿ‌ಕುಣಿದು ಕೊನೆಯಲ್ಲಿ ಅಮ್ಮನ ಮಡಿಲು ಸೇರುವಂತೆ ರಾಬರ್ಟ್ ನಿಮ್ಮ ಮಡಿಲು ಸೇರಿದೆ. ಇಂದಿನಿಂದ‌ ರಾಬರ್ಟ್ ನನ್ನದಲ್ಲ ನಿಮ್ಮದು‌ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲ ರಾಜ್ಯದ ಎಲ್ಲೆಡೆ ತೆರೆ ಕಂಡಿರುವ ರಾಬರ್ಟ್ ನೋಡಿ ಆನಂದಿಸಿ‌,ಹರಸಿ ನಿಮ್ಮ‌ಅಭಿಪ್ರಾಯ‌ತಿಳಿಸಿ. ಪರೀಕ್ಷೆ ‌ಮುಗಿಸಿದ ವಿದ್ಯಾರ್ಥಿಯಂತೆ,‌ ಎಲೆಕ್ಷನ್ ಮುಗಿಸಿದ ಅಭ್ಯರ್ಥಿಯಂತೆ‌ನಾನು ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎಂದಿದ್ದಾರೆ.

ತರುಣ್‌ ಸುಧೀರ್ ಈ‌ ಭಾವುಕ ಪತ್ರಕ್ಕೆ ರಾಬರ್ಟ್ ಹಾಗೂ ದರ್ಶನ್ ಅಭಿಮಾನಿಗಳು‌ ಮನಸೋತಿದ್ದು ಸೋಷಿಯಲ್ ಮೀಡಿಯಾದಲ್ಲಿ‌ ಪತ್ರ ಸಖತ್ ವೈರಲ್ ಆಗಿದೆ ‌ .

Comments are closed.