ಸೋಮವಾರ, ಏಪ್ರಿಲ್ 28, 2025
HomeBreakingShivrajkumar: ದಯವಿಟ್ಟು ಬೇಜಾರುಮಾಡಿಕೊಳ್ಳಬೇಡಿ…! ಶಿವಣ್ಣನ ಸ್ಪೆಶಲ್ ಮನವಿ ಹಿಂದಿನ ಕಾರಣ ಏನು ಗೊತ್ತಾ…!!

Shivrajkumar: ದಯವಿಟ್ಟು ಬೇಜಾರುಮಾಡಿಕೊಳ್ಳಬೇಡಿ…! ಶಿವಣ್ಣನ ಸ್ಪೆಶಲ್ ಮನವಿ ಹಿಂದಿನ ಕಾರಣ ಏನು ಗೊತ್ತಾ…!!

- Advertisement -

ಕೊರೋನಾ ಸೋಂಕಿನ ಕಾರಣದಿಂದ ಸಿನಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾ ನೋಡೋದನ್ನು ಮಿಸ್ ಮಾಡಿಕೊಳ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಮ್ಮ ನೆಚ್ಚಿನ ನಟನ  ಬರ್ತಡೇ ಸೆಲಿಬ್ರೇಶನ್ ಮಾಡೋದಿಕ್ಕೂ ಅವಕಾಶವಿಲ್ಲದಂತಾಗಿದೆ. ಸುದೀಪ್, ಯಶ್,ದರ್ಶನ್, ಗಣೇಶ್ ಬಳಿಕ ಇದೀಗ ಶಿವಣ್ಣ ಕೂಡ ಬರ್ತಡೇ ಸೆಲಿಬ್ರೇಶನ್ ಗೆ ನೋ ಎಂದಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜುಲೈ 12 ರಂದು ಬರ್ತಡೇ ಆಚರಿಸಿಕೊಳ್ಳಲಿದ್ದಾರೆ. ಆದರೆ ಜಗತ್ತು  ಕೊರೋನಾ ಸಂಕಷ್ಟದಲ್ಲಿರೋ ಹೊತ್ತಿನಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಣೆಗೆ ಶಿವಣ್ಣ ನೋ ಎಂದಿದ್ದು ನನಗೆ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದಿದ್ದಾರೆ.

ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಶಿವಣ್ಣ, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಕೊರೋನಾದಿಂದಾಗಿ ನಾನು ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಯಾರು ನನ್ನ ಭೇಟಿಗೆ ಬರಬೇಡಿ.

ಅನಿವಾರ್ಯ ಕಾರಣದಿಂದ ನಾನು ಅಂದು ಬೆಂಗಳೂರಿನ ನಿವಾಸದಲ್ಲೂ ಇರೋದಿಲ್ಲ. ಹೀಗಾಗಿ ನೀವಿದ್ದಲ್ಲಿಂದಲೇ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ನಿಮ್ಮ ಪ್ರೀತಿ,ವಿಶ್ವಾಸದ ಹಾರೈಕೆ ಹಂಚಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

https://fb.watch/v/Ge1tel-3/

ದೇವರ ದಯೆಯಿಂದ ಕೊರೋನಾ ಕಡಿಮೆಯಾಗಿದೆ. ಆದರೆ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಮುಗಿದಿಲ್ಲ. ಇನ್ನೂ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಕೊರೋನಾ ನಿಯಮಗಳನ್ನು ಪಾಲಿಸಬೇಕು. ನೀವೆಲ್ಲರೂ ಕೊರೋನಾ ಲಸಿಕೆ ಪಡೆದುಕೊಳ್ಳಿ. ಸುರಕ್ಷಿತವಾಗಿರಿ ಎಂದು ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸದ್ಯ ಲಾಕ್ ಡೌನ್ ತೆರವಾಗುತ್ತಿದ್ದಂತೆ ಶಿವರಾಜ್ ಕುಮಾರ್ ತಮ್ಮ 123 ಸಿನಿಮಾ ದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಶಿವಣ್ಣ ಅಭಿನಯದ ಭಜರಂಗಿ-2 ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.  

RELATED ARTICLES

Most Popular