ಚಂದನವನದಂತಿರೋ ಕನ್ನಡಚಿತ್ರರಂಗದಲ್ಲಿ ಇಬ್ಬರೂ ಸ್ಟಾರ್ ನಟರು ಮಾತ್ರ ಪರಸ್ಪರ ದೂರ-ದೂರ. ಹೀಗೆ ಸ್ನೇಹ ಮುರಿದುಕೊಂಡಿರೋ ಸಾರಥಿ ಹಾಗೂ ಶಾಂತಿನಿವಾಸದ ಸುದೀಪ್ ಸೇರಿಸೋಕೆ ಅಭಿಮಾನಿಗಳ ಸರ್ಕಸ್ ಆರಂಭವಾಗಿದೆ.

ದರ್ಶನ್ ಮತ್ತು ಸುದೀಪ್ ಸ್ನೇಹ ಮತ್ತೆ ಮೊದಲಿನಂತಾಬೇಕೆಂದು ಬಯಸುತ್ತಿರೋ ಲಕ್ಷಾಂತರ ಅಭಿಮಾನಿಗಳು ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
DbossKichhaComeTogether,
ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಭಿಮಾನಿಗಳು ಟ್ವೀಟ್ ಮಾಡ್ತಿದ್ದಾರೆ. ಸದ್ಯ ೧೦ ಸಾವಿರಕ್ಕೂ ಅಧಿಕ ಜನರು ಈ ಟ್ವೀಟ್, ಹ್ಯಾಶ್ ಟ್ಯಾಗ್ ಬಳಸುತ್ತಿದ್ದು ಟ್ವಿಟರ್ ಟ್ರೆಂಡ್ ಸೃಷ್ಟಿಸುತ್ತಿದೆ.ಇದು ಮಾತ್ರವಲ್ಲದೇ ಸುದೀಪ್ ಮತ್ತು ದರ್ಶನ್ ಸ್ನೇಹಿತರಾಗಿದ್ದ ಕಾಲದ ಪೋಟೋಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ.

ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಟರೂ ಕೂಡ ಈ ಅಭಿಯಾನಕ್ಕೆ ಕೈಜೋಡಿಸುವ ಸಾಧ್ಯತೆ ಇದೆ. ಯಾಕೆಂದರೇ ಚಿತ್ರರಂಗವೂ ಕೂಡ ಸುದೀಪ್‌ಮತ್ತು ದರ್ಶನ್ ಸ್ನೇಹ ಮತ್ತೆ ಸರಿಹೋಗಬೇಕೆಂದು ಬಯಸುತ್ತಿದೆ.

ಇನ್ನೂ ಅಭಿಮಾನಿಗಳ ಈ ಟ್ವೀಟ್ ಅಭಿಯಾನವನ್ನು ಸುದೀಪ್ ಹಾಗೂ ದರ್ಶನ್ ಗಮನಿಸಿರುವ ಸಾಧ್ಯತೆ ಇದ್ದು ಇಬ್ಬರೂ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
KicchaSudeep@dasadarshan we r waiting this to be come once again#dbosskicchareunion#DBosskicchacomeTogether pic.twitter.com/FQvfHt7AzJ
— BAADSHASH KICCHA Bos Team Official – NR Pura (@BosTeam_NRpura) March 23, 2021
೨೦೧೭ ರಲ್ಲಿ ಸಂದರ್ಶನವೊಂದರಲ್ಲಿ ದರ್ಶನ್ ಗೆ ಮೆಜೆಸ್ಟಿಕ್ ಚಿತ್ರದ ಟೈಟಲ್ ನಾನು ಸೂಚಿಸಿದ್ದೆ ಎಂದು ಸುದೀಪ್ ಹೇಳಿದ್ದು ದರ್ಶನ್ ಮತ್ತು ಸುದೀಪ್ ನಡುವಿನ ವೈಮನಸ್ಸಿಗೆ ಕಾರಣವಾಗಿದ್ದು ಇಬ್ಬರೂ ಸ್ನೇಹ ಮುರಿದುಕೊಂಡಿದ್ದರು.