ಸ್ಯಾಂಡಲ್ ವುಡ್ ನಲ್ಲಿ ಸನ್ನಿ….! ಮತ್ತೊಂದು ಹಾಡಿಗೆ ಸೊಂಟುಬಳುಕಿಸೋಕೆ ಬಂದ ಸುಂದರಿ…!!

ಸನ್ನಿ‌ಲಿಯೋನ್ ಅಂದ್ರೇ‌ ಸಾಕು ಪಡ್ಡೆಹೈಕಳ ಎದೆಬಡಿತವೇ ಏರುಪೇರಾಗುತ್ತೆ. ಕೇವಲ ಮೈಮಾಟದಿಂದಲೇ ಯುವಕರ ನಿದ್ದೆಗೆಡಿಸಿದ ಸುಂದರಿ ಸನ್ನಿ ಲಿಯೋನ್ ಮತ್ತೊಮ್ಮೆ ಚಂದನವನಕ್ಕೆ‌ ಕಾಲಿಟ್ಟಿದ್ದಾರೆ.

ಲವ್ ಯೂ ಆಲಿಯಾ ಹಾಗೂ ಡಿಕೆ ಸಿನಿಮಾದಲ್ಲಿ ಮತ್ತೇರಿಸುವಂತೆ ಕುಣಿದಿದ್ದ ಸನ್ನಿ ಲಿಯೋನ್ ಈಗ ಮತ್ತೊಮ್ಮೆ ಐಟಂ ಸಾಂಗ್ ಗಾ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ.

ಅದಿತಿ‌ ಪ್ರಭುದೇವ ‌ಹಾಗೂ ಸಚಿನ್ ಧನಪಾಲ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಛಾಂಪಿಯನ್ ಚಿತ್ರಕ್ಕಾಗಿ ಸನ್ನಿ ಕನ್ನಡಕ್ಕೆ ಮರಳಿದ್ದಾರೆ.


ಈ ಚಿತ್ರ ಕಾಮೆಡಿ ಹಾಗೂ ಲವ್ ಸ್ಟೋರಿ ಸಿನಿಮಾವಾಗಿದ್ದು, ಇದಕ್ಕೆ ಶಾಹುರಾಜ್‌ ಶಿಂಧೆ ‌ನಿರ್ದೇಶನವಿದೆ.

ಕನ್ನಡ ಹಾಗೂ ಮರಾಠಿಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾದ ಐಟಂಸಾಂಗ್ ಗಾಗಿ ಸನ್ನಿ ಸಿಲಿಕಾನ ಸಿಟಿಯಲ್ಲಿದ್ದು ಕಳೆದ ಮೂರ್ನಾಲ್ಕು ದಿನದಿಂದ ಶೂಟಿಂಗ್‌ಸಾಗಿದೆ.

ಅದಿತಿ‌ಪ್ರಭುದೇವ್ ಬ್ರಹ್ಮಚಾರಿ ಚಿತ್ರದಲ್ಲಿ ಸನ್ನಿ ಲಿಯೋನ್ ಸಖತ್ ಕುಣಿದು ಸಿನಿಮಾನ ಪಡ್ಡೆಗಳ ಫೆವರಿಟ್ ಮಾಡೋ ಸಾಧ್ಯತೆ ಹೆಚ್ಚಿದೆ.
ಉಳಿದಂತೆ ರಂಗಾಯಣ ರಘು,ಚಿಕ್ಕಣ್ಣ,ದೇವರಾಜ್,ಅವಿನಾಶ್ ಕೂಡಾ ಛಾಂಪಿಯನ್ ಚಿತ್ರದಲ್ಲಿದ್ದಾರೆ.

Comments are closed.