ಸ್ಯಾಂಡಲ್ ವುಡ್ ನಲ್ಲಿ ಎಲ್ಲ ನಟ ನಡುವೆಯೂ ಒಂದು ಸ್ನೇಹವಿದೆ. ಆದರೇ ದಚ್ಚು ಮತ್ತು ಕಿಚ್ಚ ಮಾತ್ರ ಎಂದೂ ಸೇರದ ಹಳಿಗಳಂತೆ ದೂರ-ದೂರವಾಗಿ ವರ್ಷಗಳೇ ಕಳೆದಿವೆ. ಆದರೇ ಈಗ ಮುನಿಸು ಮರೆತು ಒಂದಾಗಿದ್ದಾರೆ.

ಸ್ಯಾಂಡಲವುಡ್ ಆಕ್ಟಿಂಗ್ ಕಿಂಗ್ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿ ಸಿನಿಮಾ ಮಾಡ್ತಿದ್ದಾರಾ? ಅಂತ ನೀವು ಕೇಳಿದ್ದರೇ … ನಾವು ಹೇಳೋಕೆ ಹೊರಟಿರೋದು ಅದರ ಬಗ್ಗೆ ಅಲ್ಲ. ಬದಲಾಗಿ ಈ ಇಬ್ಬರೂ ಸ್ಟಾರ್ ಗಳು ಒಂದಾಗಿರೋದು ಕಲಾವಿದನ ಕಲ್ಪನೆಯಲ್ಲಿ.

ಕಲಾವಿದ ಕರಣ್ ಆಚಾರ್ಯ ಹೊಸಚಿತ್ರವೊಂದನ್ನು ಬರೆದಿದ್ದು ಅದರಲ್ಲಿ ರಾಮನಾಗಿ ದರ್ಶನ್ ಹಾಗೂ ಆಂಜನೇಯನಾಗಿ ಸುದೀಪ್ ಚಿತ್ರಿತಗೊಂಡಿದ್ದಾರೆ. ಸುದೀಪ್ ಮತ್ತು ದರ್ಶನ್ ರನ್ನು ಒಟ್ಟಿಗೆ ನೋಡಲು ಬಯಸುವ ಅಭಿಮಾನಿಯೊಬ್ಬರು ಕರಣ್ ಆಚಾರ್ಯ ಅವರಿಗೆ ಪೋಟೋವೊಂದನ್ನು ಕಳಿಸಿ ರಾಮಾಂಜನೇಯರನ್ನಾಗಿ ಮಾಡುವಂತೆ ಮನವಿ ಮಾಡಿದ್ದರಂತೆ.

ಅಭಿಮಾನಿಯ ಕೋರಿಕೆ ಮನ್ನಿಸಿ ಕರಣ್ ಆಚಾರ್ಯ್ ಸುದೀಪ್ ಮತ್ತು ದರ್ಶನ್ ರನ್ನು ರಾಮಾ ಮತ್ತು ಆಂಜನೇಯರಂತೆ ಚಿತ್ರಿಸಿದ್ದಾರೆ. ಈ ಪೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರು ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಭಾವಿಸಿ ಸೂಪರ್ ಎಂದು ಕಮೆಂಟ್ ಮಾಡ್ತಿದ್ದಾರೆ.

ಆದರೆ ರಿಯಲ್ ಆಗಿ ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳೋದು ಇನ್ನು ಕನಸಿನ ಮಾತು ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಸುದೀಪ್ ಮತ್ತು ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದರು.ಆದರೆ ಯಾವುದೋ ಒಂದು ಭಿನ್ನಾಭಿಪ್ರಾಯ ಇವರಿಬ್ಬರನ್ನು ದೂರ ಮಾಡಿದ್ದು, ನಾವಿನ್ನು ಸ್ಯಾಂಡಲ್ ವುಡ್ ನ ನಟರಷ್ಟೇ. ನಮ್ಮ ನಡುವೆ ಯಾವುದೇ ಸ್ನೇಹವಿಲ್ಲ ಎಂದು ದರ್ಶನ್ ಈ ಹಿಂದೆ ಟ್ವೀಟ್ ಮಾಡಿದ್ದರು.

ಆದರೆ ಈ ಇಬ್ಬರು ಸ್ಟಾರ್ ನಟರನ್ನು ಒಂದೇ ಸ್ಕ್ರಿನ್ ನಲ್ಲಿ ನೋಡ ಬಯಸುವ ಅಭಿಮಾನಿಗಳು ಮಾತ್ರ ಇಂಥ ಕಲಾವಿದರ ಕೈಚಳಕದಲ್ಲಿ ಒಂದೇ ಪ್ರೇಮ್ ನಲ್ಲಿ ಇಬ್ಬರನ್ನು ಜೋಡಿಸಿ ಸಂಭ್ರಮಿಸಿ ಖುಷಿ ಪಡ್ತಿದ್ದಾರೆ.