ಪವನ್ ಒಡೆಯರ ಬರ್ತಡೆಗೆ ಬಂದ ಪುತ್ರ….! ಜಗತ್ತಿನ ಬೆಸ್ಟ್ ಗಿಫ್ಟ್ ಎಂದ ಡೈರೆಕ್ಟರ್….!!

ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪವನ್ ಒಡೆಯರ್ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮ ದುಪ್ಪಟ್ಟಾಗೋದಿಕ್ಕೆ ಕಾರಣ ಅವರ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಪವನ್ ಹಾಗೂ ಅಪೇಕ್ಷಾ ದಂಪತಿ ಗಂಡುಮಗುವಿನ ಪೋಷಕರಾಗಿದ್ದಾರೆ.

ಹೌದು, ಡಿಸೆಂಬರ್ 10 ಪವನ್ ಒಡೆಯರ್ ಹುಟ್ಟುಹಬ್ಬ. ಅಂದೇ ಪವನ್ ಪತ್ನಿ ಅಪೇಕ್ಷಾ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಇದು ಜಗತ್ತಿನ ಅತಿ ಅದ್ಭುತ ಗಿಫ್ಟ್ ಎಂದಿರುವ ಪವನ್ ಒಡೆಯರ್ ಮಗನೇ ತಂದೆಗೆ ಹ್ಯಾಪಿ ಬರ್ತಡೇ ಎಂದು ವಿಶ್ ಮಾಡುತ್ತಿರುವ ಟೀ ಶರ್ಟ್ ಧರಿಸಿದ ನವಜಾತ ಮಗನ ಪೋಟೋ ರಿವೀಲ್ ಮಾಡಿದ್ದಾರೆ.

2018 ರಲ್ಲಿ ಕಿರುತೆರೆ ಹಾಗೂ ಚಲನಚಿತ್ರ ನಟಿ ಅಪೇಕ್ಷಾ ಪುರೋಹಿತ್ ಜೊತೆ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದ ಪವನ್ ಒಡೆಯರ್ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದರು.

ಅದೃಷ್ಟವಶಾತ ತಂದೆಯ ಹುಟ್ಟುಹಬ್ಬದಂದೇ ಮಗುವು ಜನಿಸಿದ್ದು, ಎರಡು ಕುಟುಂಬದ ಸಂಭ್ರಮಕ್ಕೆ ಕಾರಣವಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದ ಪವನ್ ಒಡೆಯರ್ ಮಗುವಿನ ಪೋಟೋವನ್ನು ನಿನ್ನೆಯೇ ಹಂಚಿಕೊಂಡಿದ್ದರು.

ಸಂಜೆ ವೇಳೆಗೆ ಮಗನೇ ತನಗೆ ಬರ್ತಡೇ ವಿಶ್ ಮಾಡುವಂತ ಪೋಟೋ ಹಂಚಿಕೊಂಡಿದ್ದಾರೆ.ಕೆಲ ದಿನಗಳ ಹಿಂದೆ ಅಪೇಕ್ಷಾ ಪುರೋಹಿತ್ ಸೀಮಂತ ಅದ್ದೂರಿಯಾಗಿ ನಡೆದಿದ್ದು, ಬೇಬಿ ಬಂಪ್ ಜೊತೆ ಆಕರ್ಷಕ ಪೋಟೋ ಶೂಟ್ ಕೂಡ ಮಾಡಿಸಿ ಗಮನಸೆಳೆದಿದ್ದರು. ನೀ ಆಗಮಿಸು ಕಾಯುತ್ತಿದೆ ನನ್ನ ತೋಳು ಎಂಬ ಗೀತೆ ಮೂಲಕ ಪವನ್ ಒಡೆಯರ್ ತಮ್ಮ ಮಗುವಿಗೆ ಸ್ವಾಗತ ಕೋರಿದ್ದರು.

Comments are closed.