ಬುಧವಾರ, ಜೂನ್ 18, 2025
HomeBreakingಸಾನ್ವಿಸುದೀಪ್ ಬದುಕಿನ ವಿಶೇಷ ವ್ಯಕ್ತಿ ಯಾರು...! ಪೋಟೋ ಸಮೇತ ಸಿಕ್ತು ಉತ್ತರ....!!

ಸಾನ್ವಿಸುದೀಪ್ ಬದುಕಿನ ವಿಶೇಷ ವ್ಯಕ್ತಿ ಯಾರು…! ಪೋಟೋ ಸಮೇತ ಸಿಕ್ತು ಉತ್ತರ….!!

- Advertisement -

ತಂದೆಯ ಸ್ಯಾಂಡಲ್ ವುಡ್ ಸಿಲ್ವರ್ ಜರ್ನಿಗೆ ಶುಭಹಾರೈಸಿದ್ದ ಅಭಿನಯ ಚಕ್ರವರ್ತಿ ಸುದೀಪ್ ಪ್ರೀತಿಯ ಪುತ್ರಿ ಸಾನ್ವಿ, ನಾನು ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಸೋದು ನಿಮ್ಮನ್ನೇ ಎಂದಿದ್ದರು. ಈಗ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಮ್ಮ ಬದುಕಿನ ವಿಶೇಷ ವ್ಯಕ್ತಿಯ ಪೋಟೋ ಮತ್ತು ಪರಿಚಯ ನೀಡಿದ್ದಾರೆ.

ಹೌದು ಬಹುಭಾಷಾ ನಟರಾಗಿ ಬೆಳೆಯುತ್ತಿರುವ ಸುದೀಪ್ ಗೆ ಪುತ್ರಿ ಎಂದರೇ ಪ್ರಾಣ. ಪುತ್ರಿ ಸಾನ್ವಿನೂ ತಂದೆ ಅಚ್ಚುಮೆಚ್ಚು. ಆದರೆ ಈಗ ಸಾನ್ವಿ ತಮ್ಮ ಬದುಕಿನ ಇನ್ನೋರ್ವ ವಿಶೇಷ ವ್ಯಕ್ತಿಯ ಪರಿಚಯ ಮಾಡಿಸಿದ್ದಾರೆ. ಅದು ಮತ್ಯಾರು ಅಲ್ಲ, ಸಾನ್ವಿ ಸಹೋದರ ಸಂಚಿತ್ ಸಂಜೀವ್.

Sudeep Kotigobba 1

ಸುದೀಪ್ ಅಕ್ಕನ ಮಗ ಸಂಚಿತ್ ವರಸೆಯಲ್ಲಿ ಸಾನ್ವಿಗೆ ಅಣ್ಣನಾಗಬೇಕು. ಹೀಗಾಗಿ ಸಾನ್ವಿ ಸಂಚಿತ್ ಸಂಜೀವ್ ಹುಟ್ಟುಹಬ್ಬಕ್ಕೆ ಅವರ ಜೊತೆಗಿನ ಪೋಟೋಗಳನ್ನು ಹಂಚಿಕೊಂಡು ಶುಭಕೋರಿದ್ದಾರೆ.ನನ್ನ ಜೀವನದ ಬೆಸ್ಟ್ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿರುವ ಸಾನ್ವಿ. ಆತ ಯಾರು ಎಂಬ ಪ್ರಶ್ನೆಗೆ ಪೋಟೋ ಶೇರ್ ಮಾಡುವ ಮೂಲಕ ಆತ ನನ್ನ ಅಣ್ಣ ಸಂಚಿತ್ ಸಂಜೀವ್ ಎಂದು ಉತ್ತರ ನೀಡಿದ್ದಾರೆ.

ಕೇವಲ ಸಾನ್ವಿ ಮಾತ್ರವಲ್ಲ ಸುದೀಪ್ ಕೂಡ ಸಂಚಿತ್ ಗೆ ಶುಭಹಾರೈಸಿದ್ದು, ನಿನಗೆ ಎಲ್ಲವೂ ಒಳ್ಳೆಯದಾಗಲಿ ಮಗನೇ. ನೀನು ಆಯ್ದುಕೊಂಡಿರುವ ಹಾದಿ ಕಷ್ಟವಾದದ್ದು. ನಿನ್ನ ಜರ್ನಿ ಖಂಡಿತ ಆರಂಭವಾಗಲಿದೆ. ಆದರೆ ಎಷ್ಟು ದೂರು ಸಾಗಬೇಕು.ಅದು ಹೇಗೆ ನೆನಪಿನಲ್ಲಿ ಉಳಿಯಬೇಕು ಎಂಬುದನ್ನು ನೀನೇ ನಿರ್ಧರಿಸಿ ಮೊದಲ ಹೆಜ್ಜೆ ಇಡು. ನಿನಗೆ ಶುಭಾಶಯ ಎಂದಿದ್ದಾರೆ.

ಸಂಚಿತ್ ಸಂಜೀವ್ ಸದ್ಯದಲ್ಲೇ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದು ಸುದೀಪ್ ಅವರೇ ಸಂಚಿತ್ ಲಾಂಚ್ ಮಾಡಲಿದ್ದಾರೆ ಎನ್ನಲಾಗಿದೆ. ಇದಕ್ಕಾಗೇ ಆತನಿಗೆ ಸಿನಿಮಾ ಇಂಡಸ್ಟ್ರಿ ಜರ್ನಿ ಬಗ್ಗೆ ತಿಳಿಸಿ ಹೇಳಿದ್ದಾರೆ ಎನ್ನಲಾಗುತ್ತಿದೆ.

Sudeep TeachAIDS Interview

ಒಟ್ಟಿನತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಸಾನ್ವಿ ಪೋಸ್ಟ್ ಸಖತ್ ಕುತೂಹಲ ಸೃಷ್ಟಿಸಿದ್ದು, ಏನೇನೋ ನೀರಿಕ್ಷೆಯಲ್ಲಿ ಸಾನ್ವಿ ಪೋಸ್ಟ್ ನೋಡಿದವರಿಗೆ ಆಕೆಯ ಸಹೋದರ ಪ್ರೀತಿಗೆ ಸಾಕ್ಷಿ ಸಿಕ್ಕಿದೆ.

RELATED ARTICLES

Most Popular