ಕೊನೆಗೂ ಕರ್ನಾಟಕಕ್ಕೆ ಬಂದ್ಲು ಕೊಡಗಿನ ಕುವರಿ…! ಪೊಗರು ಪ್ರಮೋಶನ್ ಗೆ ರಶ್ಮಿಕಾ ಎಂಟ್ರಿ…!!

ಸ್ಯಾಂಡಲ್ ವುಡ್ ನಟಿಯ ಸ್ಥಾನದಿಂದ ಬಹುಬೇಗ ಬಹುಭಾಷಾ ನಟಿ ಎನ್ನಿಸಿಕೊಂಡ ರಶ್ಮಿಕಾ ಮಂದಣ್ಣ ಅಷ್ಟೇ ಬೇಗ ಕನ್ನಡವನ್ನು,ಕನ್ನಡಿಗರನ್ನು,ಕರ್ನಾಟಕವನ್ನು ಮರೆತೇ ಬಿಟ್ಟಿದ್ದರು.

ಕನ್ನಡದಲ್ಲಿ ತಾವು ಅಭಿನಯಿಸಿದ ಕೊನೆಯ‌ ಚಿತ್ರ ಪೊಗರು ಪ್ರಮೋಶನ್ ಸೇರಿದಂತೆ ಎಲ್ಲ ಚಟುಚಟಿಕೆಯಿಂದ ಬಹುತೇಕ ಅಂತರ ಕಾಯ್ದುಕೊಂಡಿದ್ದ ಕೊನೆಗೂ ಕನ್ನಡಕ್ಕೆ ಮರಳಿದ್ದು ಪೊಗರು ಕೊನೆಯ ಹಂತದ ಪ್ರಮೋಶನ್ ನಲ್ಲಿ ಕೈ ಜೋಡಿಸಿದ್ದಾರೆ.

ಸಾಮಾನ್ಯವಾಗಿ ಬೇರೆ ಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋ ನಟಿಯರು ಕನ್ನಡದಿಂದ ಒಂದು ಅಂತರ ಕಾಯ್ದುಕೊಳ್ಳುವುದು ಇದೇ ಮೊದಲಲ್ಲ. ಇದಕ್ಕೆ ರಶ್ಮಿಕಾ ಮಂದಣ್ಣ ಕೂಡ ಹೊರತಾಗಲಿಲ್ಲ. ಹೀಗಾಗಿ ತೆಲುಗು,ತಮಿಳು ಹಾಗೂ ಇತ್ತೀಚಿಗೆ ಹಿಂದಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ ಕಸ್ತೂರಿ ಕನ್ನಡ ಮರೆತೇ ಹೋಗಿದ್ದರು.

ಮಳೆಗಾಲದ ಪ್ರವಾಹದ ಹೊತ್ತಿನಲ್ಲೂ ರಶ್ಮಿಕಾ,ಚೈನೈ ಹಾಗೂ ಹೈದ್ರಾಬಾದ್ ಸಂತ್ರಸ್ಥರಿಗಾಗಿ‌ ಮಿಡಿದಿದ್ದರೇ ವಿನಃ ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಉಲ್ಲೇಖಿಸಿರಲಿಲ್ಲ.ರಶ್ಮಿಕಾ ಈ ವರ್ತನೇ ಅಭಿಮಾನಿಗಳ ಆಕ್ರೋಶ ಹಾಗೂ ಟೀಕೆಗೂ ಕಾರಣವಾಗಿತ್ತು. ಅಷ್ಟೇ ಯಾಕೆ ಪೊಗರು ಚಿತ್ರದ ಹಾಡು ವೀಕ್ಷಣೆಯಲ್ಲಿ ದಾಖಲೆ ಬರೆದಾಗಲೂ ರಶ್ಮಿಕಾ ಕಮಕ್ ಕಿಮಕ್ ಎಂದಿರಲಿಲ್ಲ.

ಹೀಗಾಗಿ ರಶ್ಮಿಕಾ ಕನ್ನಡದಿಂದ ದೂರ ಉಳಿಯುತ್ತಾರೆ ಎಂದೇ ಭಾವಿಸಲಾಗಿತ್ತು . ಪೊಗರು ರಿಲೀಸ್ ಸುದ್ದಿಗೋಷ್ಠಿಗೂ ರಶ್ಮಿಕಾ ಗೈರಾಗಿದ್ದರು. ಹೀಗಾಗಿ ಹತ್ತಿದ ಏಣಿ ಓದೆಯೋರ ಲಿಸ್ಟಿಗೆ ರಶ್ಮಿಕಾ ನೇಮ್ ಕೂಡ ಎಂಟ್ರಿ ಯಾಗಿತ್ತು.ಆದರೆ ಅದ್ಯಾಕೋ ಗೊತ್ತಿಲ್ಲ ಪೊಗರು ಸಿನಿಮಾ ರಿಲೀಸ್ ಗೆ ವಾರವಿರುವಾಗ ರಶ್ಮಿಕಾ ದಿಢೀರ್ ಇಂಡಸ್ಟ್ರಿಗೆ ವಾಪಸ್ಸಾಗಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಬಗ್ಗೆ,ಪೊಗರು ಸಿನಿಮಾ ಬಗ್ಗೆ ಮಾಧ್ಯಮಗಳ ಜೊತೆ ಮನಬಿಚ್ಚಿ ಮಾತನಾಡಿದ್ದಳೆ.

ಪೊಗರು ರಿಲೀಸ್ ಆಗ್ತಿರೋದಿಕ್ಕೆ ನರ್ವಸ್ ಫೀಲ್ ಆಗ್ತಿದೆ ಎಂದಿರೋ ರಶ್ಮಿಕಾ, ಕೋವಿಡ್ ನಿಂದ ಕಂಗೆಟ್ಟ ಜನರು ಥಿಯೇಟರ್ ಗೆ ಬರ್ತಾರಾ? ಚಿತ್ರಮಂದಿರಗಳು ತುಂಬುತ್ತಾ ಅನ್ನೋ ಟೆನ್ಸನ್ ಗೆ ನಂಗೆ ಹೆದರಿಕೆ ಆಗ್ತಿದೆ ಎಂದಿದ್ದಾರೆ.ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಹಾಗೂ ರಶ್ಮಿಕಾ ಜೋಡಿಯಾಗಿರುವ ಈ ಚಿತ್ರ ಫೆ‌ ೧೯ ರಂದು ತೆರೆಗೆ ಬರಲಿದೆ.

Comments are closed.