ಸ್ಯಾಂಡಲ್ ವುಡ್ ನಲ್ಲಿ ಬೆಳ್ಳಿ ಹಬ್ಬದ ಸಂಭ್ರಮ…! ಸುದೀಪ್ ಗೆ ಸಲ್ಲಿಕೆಯಾಯ್ತು ಸ್ಪೆಶಲ್ ಹಾರೈಕೆ…!!

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ 25 ವರ್ಷದ ಸಿನಿಜರ್ನಿಯ ಬಳಿಕ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ.  ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಹಾಲಿವುಡ್ ತನಕ ನೂರಾರು ನಟ-ನಟಿಯರು ಸುದೀಪ್ ಸಿನಿಪಯಣವನ್ನು ಕೊಂಡಾಡಿದ್ದಾರೆ. ಆದರೆ ಸುದೀಪ್ ಮನತಟ್ಟುವ ಪುಟ್ಟ ಹಾರೈಕೆಯೊಂದು ಎಲ್ಲರ ಮನೆಸೆಳೆದಿದೆ.

ಸುದೀಪ್ ನಟನೆ-ಆಕ್ಯಂರಿಗ್ ಹೀಗೆ ಯಾವುದರಲ್ಲಿ ಬ್ಯುಸಿ ಇದ್ದರೂ ಸದಾತುಡಿಯುವುದು ಪುಟ್ಟ ಮಗಳು ಸಾನ್ವಿಗಾಗಿ. ಈಗ ಅಪ್ಪನ ಸಿನಿಜರ್ನಿ 25 ಸಾರ್ಥಕ ವಸಂತಗಳನ್ನು ಪೊರೈಸಿರುವ ಸಂಭ್ರಮದಲ್ಲಿ ತಂದೆಗೆ ಮಗಳು ಸಾನ್ವಿ ಸುದೀಪ್ ಶುಭ ಹಾರೈಸಿದ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸುದೀಪ್ ಗಾಗಿ ಸಾನ್ವಿ ಬರೆದ ಭಾವುಕ ಸಾಲುಗಳು ಮನಸೆಳೆಯುತ್ತಿದೆ.

ಸದಾಕಾಲ ತಂದೆಯ ಸಿನಿಜರ್ನಿಯ ಜೊತೆ-ಜೊತೆಗೆ ಸಾಗುತ್ತ ಬಂದ ಮಗಳು ಸಾನ್ವಿ ಸುದೀಪ್ ಚಿತ್ರದ ಹಾಡುಗಳಿಗೆ ಧ್ವನಿ ಕೂಡ ನೀಡಿದ್ದಾರೆ. ತಂದೆಯೊಂದಿಗೆ ಆಪ್ತಬಂಧ ಹೊಂದಿರುವ ಸಾನ್ವಿ ತಂದೆಯ ಶ್ರಮದ ಹಾದಿಯನ್ನು ತಮ್ಮ ಇನ್ಸಸ್ಟಾಗ್ರಾಂ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ದುಬೈನ ಬುರ್ಜ್ ಖಲೀಫಾದ ಮೇಲೆ ಲಾಂಚ್ ಆದ ವಿಕ್ರಾಂತ್ ರೋಣ ಲೋಗೋ ಹಾಗೂ ಸುದೀಪ್ ಕಟೌಟ್ ನ ವಿಡಿಯೋ ಹಂಚಿಕೊಂಡಿರುವ ಸಾನ್ವಿ, 25 ವರ್ಷಗಳನ್ನು ಪೊರೈಸಿದ್ದಕ್ಕೆ ಅಭಿನಂದನೆಗಳು ಅಪ್ಪಾ. ನೀವು ಹಂತಕ್ಕೆ ಏರಲು ಎಷ್ಟುಕಷ್ಟಪಟ್ಟಿದ್ದೀರಿ. ಎಷ್ಟು ಶೃದ್ಧೆಯಿಂದ ದುಡಿದಿದ್ದೀರಿ ಎಂಬುದನ್ನು ನಾನು ನೋಡಿದ್ದೇನೆ.

ಕೊನೆಗೂ ನೀವು ಹೆಮ್ಮೆಪಡುವ ಸಾಧನೆ ಮಾಡಿದ್ದೀರಿ.  ಸದಾಹೊಳೆಯುತ್ತಲೇ ಇದ್ದೀರಿ. ನಿಮ್ಮನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆಯ್ ಲವ್ ಯೂ ಅಪ್ಪಾ ಎಂದಿದ್ದಾರೆ.

ಸಾನ್ವಿ ಸುದೀಪ್ ಗೆ ಬರೆದ ಸಾಲುಗಳು ಹಾಗೂ ಪೋಸ್ಟ್ ಸಖತ್ ವೈರಲ್ ಆಗಿದೆ. ಸಧ್ಯ ಮ್ಯೂಸಿಕ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾನ್ವಿ ಸುದೀಪ್, ಇತ್ತೀಚಿಗಷ್ಟೇ ಪಾಪ್ ಸಾಂಗ್ ವೊಂದಕ್ಕೆ ಧ್ವನಿಯಾಗಿದ್ದು, ಆ ಹಾಡು ಯೂಟ್ಯೂಬ್ ನಲ್ಲಿ ಸಖತ್ ಹಿಟ್ ಆಗಿದೆ.

https://instagram.com/sanvisudeepofficial?igshid=1kfuqa1xgtdbz

ಸುದೀಪ್ ಗೆ ಸಂದ ಕೋಟ್ಯಾಂತರ ಹಾರೈಕೆಯಲ್ಲಿ ಸಾನ್ವಿ ವಿಶ್ ವಿಶೇಷವಾಗಿದ್ದು, ಸುದೀಪ್ ಪುತ್ರಿಯ ಹಾರೈಕೆಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.

Comments are closed.