ಭಾನುವಾರ, ಏಪ್ರಿಲ್ 27, 2025
HomeBreakingಸುದೀಪ್ ಬರ್ತಡೇ ಸ್ಪೆಶಲ್ ಸೆಲಿಬ್ರೇಶನ್ ಗೆ ಸಿದ್ಧತೆ…! ಕಿಚ್ಚನ ಹುಟ್ಟುಹಬ್ಬದಂದು ನಡೆಯಲಿದೆ ಸಾಮೂಹಿಕ ವಿವಾಹ…!!

ಸುದೀಪ್ ಬರ್ತಡೇ ಸ್ಪೆಶಲ್ ಸೆಲಿಬ್ರೇಶನ್ ಗೆ ಸಿದ್ಧತೆ…! ಕಿಚ್ಚನ ಹುಟ್ಟುಹಬ್ಬದಂದು ನಡೆಯಲಿದೆ ಸಾಮೂಹಿಕ ವಿವಾಹ…!!

- Advertisement -

ಸುದೀಪ್ ನಟ,ಆಂಕ್ಯರ್ ಹಾಗೂ ಕ್ರಿಕೆಟ್ ಪ್ಲೇಯರ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಜನರ ಕಷ್ಟಕ್ಕೆ ಮಿಡಿಯುವ ಹೀರೋ. ಇದಕ್ಕೆ ಸಾಕ್ಷಿ ಸುದೀಪ್ ಟ್ರಸ್ಟ್ ನಿಂದ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯ. ಸುದೀಪ್ ಬರ್ತಡೇ ವೇಳೆ ಮತ್ತೊಂದು ಪುಣ್ಯದ ಕೆಲಸಕ್ಕೆ ಕಿಚ್ಚ ಚ್ಯಾರಿಟೇಬಲ್ ಟ್ರಸ್ಟ್ ಮುಂದಾಗಿದೆ.

ಸುದೀಪ್ ಸ್ಯಾಂಡಲ್ ವುಡ್ ನಲ್ಲಿ 25 ವರ್ಷಗಳನ್ನು ಪೊರೈಸಿದ ಖುಷಿಯಲ್ಲಿ ವೃದ್ಧಾಶ್ರಮ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಕಿಚ್ಚ ಟ್ರಸ್ಟ್ ಸುದೀಪ್ ಹುಟ್ಟುಹಬ್ಬದ ವೇಳೆಗೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

2021 ರ ಸಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬದ ವೇಳೆ 25 ಜೋಡಿಗಳಿಗೆ ಸಾಮೂಹಿಕ ಸರಳ ವಿವಾಹ ಮಾಡಿಸಲು ಟ್ರಸ್ಟ್ ನಿರ್ಧರಿಸಿದೆ. ಆಸಕ್ತರು ಸುದೀಪ್ ಅವರ ಚ್ಯಾರಿಟೇಬಲ್ ಟ್ರಸ್ಟ್ ಸಂರ್ಪಕಿಸಿ ಹೆಸರು ನೋಂದಾಯಿಸಬಹುದಾಗಿದೆ.

ಎರಡು ಮನಸ್ಸುಗಳ ಮದುರ ಮಿಲನ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಮತ್ತೆಲ್ಲೋ ಮತ್ತೊಬ್ಬರಿಗೆ ಆಸರೆಯಾಗಿ ಬದುಕಾಗಿ ಕೊನೆ ಉಸಿರಿನವರೆಗೂ  ಉಸಿರಾಗಿ ಜೊತೆಯಾಗೋ ಸಂಬಂಧವೇ ಮದುವೆ ಎಂಬ ಸಾಲುಗಳ ಜೊತೆ ಕಿಚ್ಚನ ಅಭಿಮಾನಿಗಳು ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿವರ್ಷವೂ ಕಿಚ್ಚ ಸುದೀಪ್ ಹುಟ್ಟುಹಬ್ಬದ ವೇಳೆ ಅಭಿಮಾನಿಗಳು ಮನೆಗೆ ಆಗಮಿಸಿ ಸುದೀಪ್ ಗೆ ಶುಭಕೋರಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ  ಈ ವರ್ಷ ಸುದೀಪ್ ಕೊರೋನಾದಿಂದ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಂಡಿರಲಿಲ್ಲ.

ಹೀಗಾಗಿ 2021 ರಲ್ಲಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಕಿಚ್ಚ ಸುದೀಪ್ ಟ್ರಸ್ಟ್ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

RELATED ARTICLES

Most Popular