ಚೀನಾಕ್ಕೆ ಠಕ್ಕರ್ ಕೊಟ್ಟ ಸೌದಿ ಅರೇಬಿಯಾ : 184 ಚೀನಿ ವೆಬ್ ಸೈಟ್ ನಿಷೇಧ

ಅನಿತಾ ಬ್ರಹ್ಮಾವರ (ವಿಶೇಷ ಪ್ರತಿನಿಧಿ)

ಸೌದಿಅರೇಬಿಯಾ : ಭಾರತದ ಬೆನ್ನಲ್ಲೇ ಚೀನಾಕ್ಕೆ ಸೌದಿ ಅರೇಬಿಯಾ ಬಿಗ್ ಶಾಕ್ ಕೊಟ್ಟಿದೆ. ಈ ಮಾರುಕಟ್ಟೆಗೆ ಸರಕುಗಳನ್ನು ನಕಲಿ ಆಫರ್ ನೀಡಿ ಮಾರಾಟ ಮಾಡುತ್ತುದ್ದ 184 ಚೀನಿ ವೆಬ್ ಸೈಟ್ ಗಳಿಗೆ ಸೌದಿ ಅರೇಬಿಯಾ ನಿಷೇಧ ಹೇರಿದೆ.

ಸೌದಿ ಅರೇಬಿಯಾದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು, ಸುಗಂಧದ್ರವ್ಯ, ಬ್ಯಾಗ್, ಶೂ, ಬಟ್ಟೆ ಹಾಗೂ ಸೌಂದರ್ಯವರ್ಧಕಗಳಂತಹ ವಸ್ತುಗಳು ಆನ್ ಲೈನ್ ಮೂಲಕವೇ ಅತೀ ಹೆಚ್ಚು ಪ್ರಮಾಣದಲ್ಲಿ ಸೇಲ್ ಆಗಿದೆ. ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಚೀನಾದ ವೆಬ್ ಸೈಟ್ ಗಳು ಅರೇಬಿಕ್ ಭಾಷೆಯಲ್ಲಿ ಜಾಹೀರಾತು ನೀಡಿ ಜನರನ್ನು ತಮ್ಮತ್ತ ಆಕರ್ಷಿಸಿದೆ. ಆದರೆ ನಂತರದಲ್ಲಿ ಗ್ರಾಹಕರಿಗೆ ವಸ್ತುಗಳನ್ನು ಹಿಂದಕ್ಕೆ ಪಡೆಯಲು ಹಾಗೂ ಬದಲಾಯಿಸಿಕೊಡುವ ಸೇವೆಗಳ ಆಯ್ಕೆಯನ್ನು ಒದಗಿಸುವಲ್ಲ ವಿಫಲವಾಗಿವೆ ಎಂಬ ಆರೋಪ ಕೇಳಿಬಂದಿತ್ತು.

https://kannada.newsnext.live/lockdown-again-in-the-state-cm-yeddyurappa-warning/

ಅಷ್ಟೇ ಅಲ್ಲಾ ಗ್ರಾಹಕರ ಸೇವೆಯ ಜೊತೆ ಜೊತೆಗೆ ಸ್ಟೋರ್ ಡೇಟಾ, ಸಂಪರ್ಕ ಸಂಖ್ಯೆ ಹಾಗೂ ವಿಳಾಸವನ್ನು ನೀಡುವಲ್ಲಿಯೂ ವಿಫಲವಾಗಿವೆ. ಈ ಹಿ ನ್ನೆಲೆಯಲ್ಲಿ ಸೌದಿ ಅರೇಬಿಯಾ ಸಚಿವಾಲಯ ಇಂತಹ ಆನ್ ಲೈನ್ ಜಾಹೀರಾತುಗಳಿಗೆ ಪ್ರತಿಕ್ರಿಯೆ ನೀಡದಂತೆ ಮನವಿ ಮಾಡಿತ್ತು.

https://kannada.newsnext.live/maharastra-corona-cases-hike-lockdown/

ಹೀಗಾಗಿ ಚೀನಾ ಹೊಸ ಹೆಸರಲ್ಲಿ ವೆಬ್ ಸೈಟ್ ನಿರ್ಮಿಸಿ ಆನ್ ಲೈನ್ ಮೂಲಕ ಗ್ರಾಹಕರಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಇದನ್ನು ಮನಗಂಡ ಸೌದಿ ಅರೇಬಿಯಾ ಸರಕಾರ ಇದೀಗ 184 ಚೀನಾ ಆಪ್ ಗಳಿಗೆ ನಿಷೇಧ ಹೇರಿದೆ.

Comments are closed.