ರೂಬಿಕ್ಸ್ ಕ್ಯೂಬ್ ನಲ್ಲಿ ಸಿದ್ಧವಾಯ್ತು ರನ್ನನ ಪೋಟೋ….!ಬಾಲಕನ ಅಭಿಮಾನಕ್ಕೆ ಮನಸೋತ ಕಿಚ್ಚ ಸುದೀಪ್…!!

ಕೇವಲ ತೆರೆ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ನಿಜವಾದ ಹಿರೋ ಕಿಚ್ಚ ಸುದೀಪ್. ಕೊರೋನಾ ಸಂಕಷ್ಟದಲ್ಲಿ ಚಿತ್ರರಂಗ ಹಾಗೂ ಜನರ ಸಂಕಷ್ಟಕ್ಕೆ ಮಿಡಿದಿರುವ ಕಿಚ್ಚ ಸುದೀಪ್ ಎಲ್ಲರಿಗೂ ಸಹಾಯಹಸ್ತ ಚಾಚಿದ್ದಾರೆ. ಇದೀಗ ತಮ್ಮ ಕ್ಯೂಟ್ ಅಭಿಮಾನಿಯೊಬ್ಬನ ಅಭಿಮಾನಕ್ಕೆ ಸೋತ ಸುದೀಪ್ ಪ್ರೀತಿಯ ಅಪ್ಪುಗೆಯೊಂದಿಗೆ ರಿಪ್ಲೈ ಮಾಡಿದ್ದಾರೆ.

https://kannada.newsnext.live/chamarajanagar-oxygen-tragedy-48-laksh-compensation-release/

ಕರ್ನಾಟಕ ಮಾತ್ರವಲ್ಲ ದೇಶದೆಲ್ಲೆಡೆಯೂ ಕಿಚ್ಚ ಸುದೀಪ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಪೈಕಿ ಪುಟ್ಟ ಹುಡುಗನೊಬ್ಬ ಸುದೀಪ್ ಮೇಲಿನ ಅಭಿಮಾನದಿಂದ ಕಿಚ್ಚ ಸುದೀಪ್  ರೂಬಿಕ್ಸ್  ಕ್ಯೂಬ್ ನಿಂದ ಮೊಸಾಯಿಕ್ ನಿರ್ಮಿಸಿ ಕಿಚ್ಚನ ಮನಗೆದ್ದಿದ್ದಾರೆ.

https://kannada.newsnext.live/12th-standard-exams-cancel-today-central-meeting/

ಇದಕ್ಕಾಗಿ ಕಿಚ್ಚನ ಅಭಿಮಾನಿ ಬಾಲಕ ಬರೋಬ್ಬರಿ 475 ರ್ಯೂಬಿಕ್ ಕ್ಯೂಬ್ಸ್ ಬಳಸಿದ್ದು, 9 ಗಂಟೆಗಳನ್ನು ಇದಕ್ಕಾಗಿ ವ್ಯಯಿಸಿದ್ದಾನಂತೆ. ಮೊಸಾಯಿಕ್ ತಯಾರಿಸುವ ವಿಡಿಯೋವನ್ನು ಪಿ.ಕೆ.ಶಶಾಂಕ್ ತಮ್ಮ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಸುದೀಪ್ ರಿಗೆ ಇದನ್ನು ತಲುಪಿಸಲು ನೆರವಾಗಿ ಎಂದು ಮನವಿ ಮಾಡಿದ್ದರು.

ಬೆಲೆ ಕಟ್ಟಲಾಗದ ಅಭಿಮಾನಿಯ ಅಭಿಮಾನಕ್ಕೆ ಮನಸೋತಿರುವ ಸುದೀಪ್, ಭಾವುಕರಾಗಿ ರಿಪ್ಲೈ ಮಾಡಿದ್ದಾರೆ. ಥ್ಯಾಂಕ್ ಯೂ ಸೋ ಮಚ್ ಮೈ ಪ್ರೆಂಡ್. ನಿಮ್ಮ ಪ್ರೀತಿ ಹಾಗೂ ಶ್ರಮಕ್ಕೆ. ನನಗೆ ಮಾತೇ ಬರ್ತಿಲ್ಲ.ಬಿಗ್ ಹಗ್ ಸೇಫಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.

Comments are closed.