ಮಂಗಳವಾರ, ಏಪ್ರಿಲ್ 29, 2025
HomeBreakingನಿತ್ಯಾನಂದನ ಆಶ್ರಮ ಸೇರಿದ ಮತ್ತೊಬ್ಬ ಕನ್ನಡತಿ…! ಇಷ್ಟಕ್ಕೂ ಆ ನಟಿಯ ಕಷ್ಟಕ್ಕೆ ನಿತ್ಯಾನಂದ ಮಾಡಿದ ಮೋಡಿ...

ನಿತ್ಯಾನಂದನ ಆಶ್ರಮ ಸೇರಿದ ಮತ್ತೊಬ್ಬ ಕನ್ನಡತಿ…! ಇಷ್ಟಕ್ಕೂ ಆ ನಟಿಯ ಕಷ್ಟಕ್ಕೆ ನಿತ್ಯಾನಂದ ಮಾಡಿದ ಮೋಡಿ ಏನುಗೊತ್ತಾ…?!

- Advertisement -

ನಿತ್ಯಾನಂದ ಸ್ವಾಮಿ ಆಧ್ಯಾತ್ಮಕ್ಕಿಂತ  ಅನಾಚಾರದಿಂದಲೇ ಗಮನ ಸೆಳೆದವರು. ಆದರೂ ನಿತ್ಯಾನಂದನನ್ನು ನಂಬಿ ಆಶ್ರಮ ಸೇರಿದವರಿಗೇನು ಕೊರತೆ ಇಲ್ಲ. ಈಗ  ಈ ಸಾಲಿಗೆ ಕನ್ನಡತಿ ಹಾಗೂ ಬಹುಭಾಷಾ ನಟಿ ಕೌಸಲ್ಯ ಹೊಸಸೇರ್ಪಡೆ. ಇಷ್ಟಕ್ಕೂ ಈ ನಟಿ ನಿತ್ಯಾನಂದನ ಮೋಡಿಗೆ ಒಳಗಾಗಿದ್ದೇಗೆ? ಇಲ್ಲಿದೆ ಡಿಟೇಲ್ಸ್.

ಸ್ಯಾಂಡಲ್ ವುಡ್ ನಟಿ ರಂಜಿತಾ ನಿತ್ಯಾನಂದನ ಆಶ್ರಮ ಸೇರಿದ್ದು ಸಾಕಷ್ಟು ವಿವಾದ ಸೃಷ್ಟಿಸಿದ್ದು ಈಗ ಹಳೆ ವಿಷಯ. ಈಗ ಮತ್ತೊಬ್ಬ ಕನ್ನಡತಿ ನಿತ್ಯಾನಂದನ ಮೋಡಿಗೆ ಒಳಗಾಗಿದ್ದಾರೆ. ಅದು ಮತ್ಯಾರು ಅಲ್ಲ ಕನ್ನಡತಿ ಹಾಗೂ ಬಹುಭಾಷಾ ನಟಿ ಕೌಸಲ್ಯ. ಬೆಂಗಳೂರಿನಲ್ಲೇ ಹುಟ್ಟಿಬೆಳೆದ ಕೌಸಲ್ಯ ತಮ್ಮ ಅನಾರೋಗ್ಯ ಪರಿಹರಿಸಿದ್ದಾರೆ ಎಂಬ ಕಾರಣಕ್ಕೆ ನಿತ್ಯಾನಂದನ ಪ್ರಭಾವಕ್ಕೆ ಒಳಗಾಗಿದ್ದಾರೆ.

ಕೌಸಲ್ಯ ಬೆಂಗಳೂರಿನ ಹುಡುಗಿ. ಈಕೆ ಈಗಾಗಲೇ, ತಮಿಳು,ತೆಲುಗು ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕೌಸಲ್ಯ ನಿತ್ಯಾನಂದನ ಶಿಷ್ಯತ್ವ ಸ್ವೀಕಾರ ಮಾಡಿದ್ದಾರೆ.

ಕನ್ನಡದಲ್ಲಿ ಬದ್ರಿ, ಗೌತಮ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ ಕೌಸಲ್ಯ ಕೆಲತಿಂಗಳಿನಿಂದ ಕಾಲುಹಿಮ್ಮಡಿ ನೋವಿಗೆ ಒಳಗಾಗಿದ್ದರಂತೆ.

ಆದರೆ ಯಾವುದೇ ಔಷಧಿಯಿಂದ ಇದು ಕಡಿಮೆಯಾಗಿಲ್ಲ. ಹೀಗಾಗಿ ಕೌಸಲ್ಯ ನಿತ್ಯಾನಂದನ ಆಶ್ರಮಕ್ಕೆ ಹೋಗಿ ಅಲ್ಲಿ ಹಿಲಿಂಗ್ ಥೆರಪಿ ತೆಗೆದುಕೊಳ್ಳಲು ಆರಂಭಿಸಿದ್ರಂತೆ. ಇದರಿಂದ ಹಿಮ್ಮಡಿ ನೋವು ತಕ್ಷಣ ಕಡಿಮೆಯಾಗಿದೆಯಂತೆ. ಹೀಗಾಗಿ ಕೌಸಲ್ಯ ನಿತ್ಯಾನಂದನ ಭಕ್ತೆಯಾಗಿದ್ದಾರೆ.

ಈ ವಿಚಾರ ಈಗ ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತದಲ್ಲೇ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಇನ್ಯಾವಾಗ ಕೌಸಲ್ಯ ನಿತ್ಯಾನಂದನ ಹೊಸ ವಿವಾದ ತಲೆಎತ್ತಲಿದೆಯೋ ಕಾದು ನೋಡಬೇಕಿದೆ.

RELATED ARTICLES

Most Popular