ಸೋಷಿಯಲ್ ಮೀಡಿಯಾಗೆ ಬಂದ ಕನಸುಗಾರ…!ರವಿಚಂದ್ರನ್ ಎಂಟ್ರಿ ಸ್ಪೆಶಲ್ ಏನು ಗೊತ್ತಾ…!?

ಸ್ಯಾಂಡಲ್ ವುಡ್ ನಟ-ನಟಿಯರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇದ್ದಾರೆ. ಒಂದರ್ಥದಲ್ಲಿ ಅರ್ಧ ಸಿನಿಮಾ ಪ್ರಮೋಶನ್ ಸೋಷಿಯಲ್ ಮೀಡಿಯಾದಲ್ಲೇ ನಡೆದುಹೋಗುತ್ತೆ. ಆದರೆ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಸೋಷಿಯಲ್ ಮೀಡಿಯಾಗೆ ಲೇಟಾದ್ರೂ ಲೇಟೆಸ್ಟ್ ಎಂಟ್ರಿಕೊಟ್ಟಿದ್ದಾರೆ. 

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ ರವಿಚಂದ್ರನ್ ಏನು ಮಾಡಿದ್ರೂ ಸ್ಪೆಶಲ್ ಆಗೇ ಮಾಡ್ತಾರೆ.  ಆ ಮಾತು ಅವರ ಸೋಷಿಯಲ್  ಮೀಡಿಯಾ ಎಂಟ್ರಿಯಲ್ಲೂ ನಿಜವಾಗಿದೆ. ಇಷ್ಟು ವರ್ಷಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ರವಿಚಂದ್ರನ್ ಈಗ ಯೂಟ್ಯೂಬ್ ಚಾನೆಲ್ ಮತ್ತು ಇನ್ ಸ್ಟಾಗ್ರಾಂ  ಮೂಲಕ ಶುಭಾರಂಭ ಮಾಡಿದ್ದಾರೆ.

1 n 1nly ravichandran’
ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ಜೊತೆಗೆ ತಾವೇ ರಚಿಸಿದ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಂದೆ ವೀರಸ್ವಾಮಿಯವರಿಗೆ ಗೌರವ ಸಲ್ಲಿಸಿದ್ದಾರೆ.

ಮೊದಲ ದಿನವೇ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.  ಯೂಟ್ಯೂಬ್ ಜೊತೆಗೆ ಇನ್ ಸ್ಟಾಗ್ರಾಂನಲ್ಲೂ  ರವಿಚಂದ್ರನ್ ಖಾತೆ ತೆರೆದಿದ್ದು,  ಮೊದಲ ದಿನವೇ ನೂರಾರು ಜನರು ಕ್ರೇಜಿಸ್ಟಾರ್ ಅನುಸರಿಸಿದ್ದಾರೆ.

ಕೆಲವು ದಿನಗಳಿಂದ ರವಿಚಂದ್ರನ್ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತುಕೇಳಿಬಂದಿತ್ತು. ಈಗ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅದ್ದೂರಿತನಕ್ಕೆ ಹೆಸರಾದ ರವಿಚಂದ್ರನ್ ಈಗ ಸೋಷಿಯಲ್ ಮೀಡಿಯಾ ಎಂಟ್ರಿಯಲ್ಲೂ ತಮ್ಮ ವಿಭಿನ್ನತೆ ಮೆರೆದಿದ್ದಾರೆ.
 

Comments are closed.