ಭಾನುವಾರ, ಏಪ್ರಿಲ್ 27, 2025
HomeBreakingPushpa vs Kgf: ಪುಷ್ಪ ಸಿನಿಮಾ ಹೊಗಳುವ ಭರದಲ್ಲಿ ಕೆಜಿಎಫ್ ಗೆ ಅವಮಾನ…! ಟಾಲಿವುಡ್ ನಿರ್ದೇಶಕನ...

Pushpa vs Kgf: ಪುಷ್ಪ ಸಿನಿಮಾ ಹೊಗಳುವ ಭರದಲ್ಲಿ ಕೆಜಿಎಫ್ ಗೆ ಅವಮಾನ…! ಟಾಲಿವುಡ್ ನಿರ್ದೇಶಕನ ವಿರುದ್ಧ ಆಕ್ರೋಶ….!!

- Advertisement -

ವಿವಿಧ ಭಾಷೆಗಳ ಚಿತ್ರರಂಗದ ನಡುವೆ ಸ್ಪರ್ಧೆ ಇರೋದು ಕಾಮನ್. ಆದರೆ ಈ ಸ್ಪರ್ಧೆಯ ಭರದಲ್ಲಿ ನಿರ್ದೇಶಕರೊಬ್ಬರು ಕೆಜಿಎಫ್ ಕುರಿತು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಪುಷ್ಪ ಸಿನಿಮಾವನ್ನು ಕೆಜಿಎಫ್ ಜೊತೆ ಹೋಲಿಸಿ ಮಾತನಾಡಿದ ನಿರ್ದೇಶಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ತೆಲುಗಿನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಹುನೀರಿಕ್ಷಿತ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಕ್ತಚಂದನ ಕಳ್ಳಸಾಗಾಣಿಕೆಯ ಕಥಾಹಂದರ ಹೊಂದಿದ  ಈ ಸಿನಿಮಾ ತನ್ನ ಅದ್ದೂರಿ ನಿರ್ಮಾಣದಿಂದ ಈಗಾಗಲೇ ಸಾಕಷ್ಟು ಸುದ್ದಿಮಾಡಿದೆ.

ಈಗಾಗಲೇ ಪುಷ್ಪ ಸಿನಿಮಾದ ಪಾರ್ಟ್ 1 ಚಿತ್ರೀಕರಣ ಮುಗಿದಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಚಿತ್ರತಂಡ ಚಿತ್ರವನ್ನು ಅಗಸ್ಟ್ ನಲ್ಲಿ ತೆರೆಗೆ ತರಲು ಸಿದ್ಧವಾಗಿತ್ತು. ಆದರೆ ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ಹಾಗೂ ನಿಯಮಗಳ ಕಾರಣಕ್ಕೆ ಸಿನಿಮಾ ರಿಲೀಸ್ ಮುಂದಕ್ಕೆ ಹೋಗೋ ಸಾಧ್ಯತೆ ಇದೆ.

ತೆಲುಗಿನ ಪುಷ್ಪ ಸಿನಿಮಾ ನೋಡಿದ ಉಪ್ಪೆನ್ ನಿರ್ದೇಶಕ ಬುಚ್ಚಿ ಬಾಬು ಸನಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಬುಚ್ಚಿ ಬಾಬು ಹೇಳಿಕೆ ಸ್ಯಾಂಡಲ್ ವುಡ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚಿಗೆ ಪುಷ್ಪ ಸಿನಿಮಾ ನೋಡಿರುವ ಬುಚ್ಚಿ ಬಾಬು, ಪುಷ್ಪ ಸಿನಿಮಾ ಅದ್ಭುತವಾಗಿ ಮೂಡಿಬಂದಿದ್ದು, ಇದು 10 ಕೆಜಿಎಫ್ ಗೆ ಸಮ ಎಂದಿದ್ದಾರೆ. ಈ ಸಿನಿಮಾದಲ್ಲಿ ತೊಡಗಿಕೊಂಡಿರುವರೆಲ್ಲರ ಕೆರಿಯರ್ ನಲ್ಲಿ ಇದೊಂದು ಅತ್ಯುತ್ತಮ ಸಾಧನೆಯ ಸಿನಿಮಾವಾಗಲಿದೆ ಎಂದಿದ್ದಾರೆ.

ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಬುಚ್ಚಿ ಬಾಬು ಉಪ್ಪೆನ್  ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಹಿಟ್ ಆದ ಬಳಿಕ ಬುಚ್ಚಿ ಬಾಬು ನಿರ್ದೇಶನಕ್ಕೆ ಬೇಡಿಕೆ ಹೆಚ್ಚಿದೆ. ಆದರೆ ಕನ್ನಡ ಸಿನಿಮಾದ ಬಗ್ಗೆ ಬುಚ್ಚಿ ಬಾಬು ಮಾಡಿರೋ ಕಮೆಂಟ್ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲೂ ಅರ್ಜುನ್ ನಟನೆಯ ಪುಷ್ಪದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಡಾಲಿ ಧನಂಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

RELATED ARTICLES

Most Popular