Microsoft Chairman : ಸತ್ಯ ನಾಡೆಲ್ಲಾ ಮೈಕ್ರೋ ಸಾಫ್ಟ್ ಚೇರ್ಮೆನ್

ವಾಷಿಂಗ್ಟನ್ : ವಿಶ್ವದ ಸಾಫ್ಟರ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ನೂತನ ಚೇರ್ಮನ್ ಆಗಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರನ್ನು ನೇಮಕ ಮಾಡಿದೆ. ಸತ್ಯ ನಾಡೆಲ್ಲಾ ಮೈಕ್ರೋ ಸಾಫ್ಟ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಉನ್ನತ ಹುದ್ದೆಯನ್ನು ನೀಡಿದೆ

2014 ರಿಂದಲೂ ಮೈಕ್ರೋಸಾಫ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್ ಕಂಪೆನಿಯ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. 2014ರಲ್ಲಿ ಜಾನ್ ಥಾಮ್ಸನ್ ಅವರು ಚೇರ್ಮನ್ ಆಗಿ ಆಯ್ಕೆಯಾಗಿದ್ದರು. ಜಾನ್ ಥಾಮ್ಸನ್ ಅವರು ಮೈಕ್ರೋ ಸಾಫ್ಟ್ ಸಹ ಸ್ಥಾಪಕರಾಗಿರುವ ಬಿಲ್ ಗೇಟ್ಸ್ ಅವರಿಂದ ಈ ಸ್ಥಾನವನ್ನು ಪಡೆದಿದ್ದರು. ಇನ್ಮುಂದೆ ಜಾನ್ ಥಾಮ್ಸನ್ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಭಾರತೀಯ ಮೂಲದ ಸತ್ಯ ಅವರಿಗೆ ಮೈಕ್ರೋಸಾಫ್ಟ್ ಕಂಪೆನಿಯು ಉನ್ನತ ಹುದ್ದೆಯನ್ನು ನೀಡಿದೆ. ಅಲ್ಲದೇ ಇದೇ ವೇಳೆಯಲ್ಲಿ ಕಂಪೆನಿ ಷೇರುದಾರರಿಗೆ ಶೇ.56 ಸೆಂಟ್ಸ್ ಡಿವಿಡೆಂಡ್ ಘೋಷಣೆಯನ್ನು ಮಾಡಿದೆ.

Comments are closed.