BMTC: ರಾಜಧಾನಿಗೆ ಜನರಿಗೆ ಸಿಹಿಸುದ್ದಿ…! ಜೂನ್ 21 ರಿಂದ ರಸ್ತೆಗಿಳಿಯಲಿವೆ ಬಿಎಂಟಿಸಿ ಬಸ್…!!

ಬೆಂಗಳೂರು:  ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿದ್ದು,  ಅನ್ ಲಾಕ್ ಆರಂಭಗೊಂಡಿದೆ.  ಮೊದಲನೆ ಹಂತದಲ್ಲಿ ಕೆಲವು ವ್ಯವಸ್ಥೆಗಳನ್ನು ಅನ್ ಲಾಕ್ ಮಾಡಲಾಗಿದೆ. ಸತತವಾಗಿ ಕೊರೋನಾ ಕೇಸ್ ಗಳಲ್ಲಿ ಇಳಿಕೆಯಾಗಿರೋದರಿಂದ ಜೂನ್ 21 ರಿಂದ ಎರಡನೇ ಹಂತದ ಅನ್ ಲಾಕ್ ಆರಂಭವಾಗಲಿದ್ದು, ಬಸ್ ಗಳು ರಸ್ತೆಗಿಳಿಯಲಿವೆ.  

ಸೋಮವಾರದಿಂದ ರಾಜ್ಯ ಸರ್ಕಾರ ಎರಡನೇ ಹಂತದ ಅನ್ ಲಾಕ್ ಪ್ರಕ್ರಿಯೆಗಳನ್ನು ಆರಂಭಿಸಲು ನಿರ್ಧರಿಸಿದೆ. ಹೀಗಾಗಿ ಸಾರಿಗೆ ಇಲಾಖೆ ಕೂಡ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಸೇರಿದಂತೆ ಹಲವು ನಿಯಮಗಳ ಜೊತೆ ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

ಈಗಾಗಲೇ ಜೀವನಾಶ್ಯವಕ ವಸ್ತುಗಳ ಮಾರಾಟ ಸೇರಿದಂತೆ ವಿವಿಧ ಅಂಗಡಿಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಗಾರ್ಮೆಂಟ್ಸ್, ಸರ್ಕಾರಿ ಕಚೇರಿಗಳಿಗೂ ಅವಕಾಶ ನೀಡಲಾಗಿದೆ.

ಸೋಮವಾರದಿಂದ ಎರಡನೇ ಹಂತದ ಅನ್ ಲಾಕ್ ನಲ್ಲಿ ಇನ್ನಷ್ಟು ನಿಯಮಗಳನ್ನು ಸಡಿಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಕಳೆದ ಒಂದು ತಿಂಗಳಿನಿಂದಲೂ ಅಧಿಕ ಸಮಯದಿಂದ ಡಿಪೋದಲ್ಲೇ ಇರುವ ಬಸ್ ಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ಸನ್ನದ್ಧವಾಗಿದೆ.

ಇನ್ನೊಂದೆಡೆ ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಆರಂಭಗೊಳ್ಳಲಿದ್ದು, ಸದ್ಯ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂಗಳನ್ನು ರಾಜ್ಯ ಸರ್ಕಾರ ಮುಂದುವರೆಸಿದೆ.

Comments are closed.