ವೀರಪ್ಪನ್ ವೆಬ್ ಸೀರಿಸ್ ಗೆ ಮತ್ತೆ ಕಂಟಕ….! ಹಳೆ ಚಾಳಿಯಂತೆ ಮತ್ತೆ ತಡೆಯಾಜ್ಞೆ ತಂದ ಮುತ್ತುಲಕ್ಷ್ಮೀ..!!

ಬಹುಭಾಷೆಗಳಲ್ಲಿ ರಿಲೀಸ್ ಗೆ ಸಿದ್ಧವಾಗಿದ್ದ ವೀರಪ್ಪನ್ ಹಂಟರ್ ಫಾರ್‌ ಕಿಲ್ಲಿಂಗ್ ವೆಬ್ ಸೀರಿಸ್ ಗೆ ಸಿಟಿಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದ್ದು ನಿರ್ದೇಶಕ ಎ.ಎಂ.ಅರ್.ರಮೇಶ್ ಗೆ ಸಂಕಟ ಎದುರಾಗಿದೆ.

ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಈ ವೆಬ್ ಸೀರಿಸ್ ಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮುತ್ತುಲಕ್ಷ್ಮೀ ಅರ್ಜಿ ಪರಿಗಣಿಸಿದ ನ್ಯಾಯಾಲಯ ಸಾಮಾಜಿಕ ಜಾಲತಾಣ,ಓಓಟಿ ಸೇರಿದಂತೆ ಯಾವುದೇ ಮಾಧ್ಯಮದಲ್ಲೂ ವೆಬ್ ಸೀರಿಸ್ ಪ್ರದರ್ಶಿಸದಂತೆ ಸ್ಟೇ ನೀಡಿದೆ.

ಅಟ್ಟಹಾಸ ಸಿನಿಮಾ ಬಳಿಕ ಮತ್ತೊಮ್ಮೆ ವೀರಪ್ಪನ ಕಥಾಹಂದರವನ್ನು ಕೈಗೆತ್ತಿಕೊಂಡಿದ್ದ ನಿರ್ದೇಶಕ ಎಎಂಆರ್ ರಮೇಶ್ ೧೦ ಎಪಿಸೋಡ್ ಗಳಲ್ಲಿ ವೀರಪ್ಪನ್ ಕುರಿತ ಇಂಟ್ರಸ್ಟಿಂಗ್ ಸಂಗತಿಗಳನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದರು.

ಲಾಕ್ ಡೌನ್ ತೆರವಾದ ಬಳಿಕ ಅಗಸ್ಟ್ ದಿಂದ ವೆಬ್ ಸೀರಿಸ್ ಶೂಟಿಂಗ್ ಆರಂಭಗೊಂಡಿದ್ದು ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಇಂಚಿಂಚೂ ಮಾಹಿತಿ ಪಡೆದು ಅದರ ಆಧಾರದ ಮೇಲೆ ವೆಬ್ ಸೀರಿಸ್ ಶೂಟಿಂಗ್ ನಡೆಸಿ ವೀರಪ್ಪನ ಕ್ರೌರ್ಯವನ್ನು ಬಿಚ್ಚಿಡುವ ಪ್ರಯತ್ನದಲ್ಲಿದ್ದರು ನಿರ್ದೇಶಕ ರಮೇಶ್.

ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೇ, ಪ್ರಸಾದ್ ವಶಿಷ್ಠ್ ಸೇರಿದಂತೆ ಹಲವು ಪ್ರಮುಖ ನಟರು ಇತರ ಪಾತ್ರಗಳಿಗೆ ಜೀವ ತುಂಬಿದ್ದರು.ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದ ಈ ವೆಬ್ ಸೀರಿಸ್ ಕನ್ನಡ,ತೆಲುಗು,ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಆದರೆ ವೀರಪ್ಪನ್ ಹಂಗರ್‌ಫಾರ್ ಕಿಲ್ಲಿಂಗ್ ಟೈಟಲ್ ಹಾಗೂ ವೆಬ್ ಸೀರಿಸ್ ವಿರುದ್ಧ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಅಕ್ರೋಶ ವ್ಯಕ್ತಪಡಿಸಿದ್ದು‌ ನ್ಯಾಯಾಲಯದ ಸಹಾಯದಿಂದ ವೆಬ್ ಸೀರಿಸ್ ಬಿಡುಗಡೆ ಮೇಲೆ ನಿಯಂತ್ರಣ ಹೇರಿದ್ದಾರೆ.

ಈ ಬಗ್ಗೆ ಮಾತನಾಡಿದ ಮುತ್ತುಲಕ್ಷ್ಮೀ, ನಿರ್ದೇಶಕ ಎ.ಎಂಅರ್ ರಮೇಶ್ ಯಾಕೆ ವೀರಪ್ಪನ್ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ವೀರಪ್ಪನ್ ರನ್ನು ಯಾವಾಗಲೂ ಕೆಟ್ಟವರಾಗಿ ತೋರಿಸುತ್ತಾರೆ. ಅವರು ಮಾಡಿದ ಒಳ್ಳೆಯ ಕಾರ್ಯಗಳನ್ನು ತೋರಿಸೋದಿಲ್ಲ.

ರಮೇಶ್ ಇಂಥ ವೆಬ್ ಸೀರಿಸ್ ಹಾಗೂ ಸಿನಿಮಾದಿಂದ ಮಕ್ಕಳು ನಾನು ಗೌರವ ದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅಟ್ಟಹಾಸ ಸಿನಿಮಾದ‌ ಸಂದರ್ಬದಲ್ಲೂ ರಮೇಶ್ ಹೀಗೆ ವರ್ತಿಸಿದ್ದರು. ವೀರಪ್ಪನ್ ಬಗ್ಗೆ ಯಾವುದೇ ಸಿನಿಮಾ,ವೆಬ್ ಸೀರಿಸ್ ಮಾಡಬೇಡಿ ಎಂದು ನಾನು ಮನವಿ‌ಮಾಡುತ್ತೇನೆ ಎಂದಿದ್ದಾರೆ.

ಆದರೆ ಸಾಕಷ್ಟು ಶ್ರಮವಹಿಸಿ ವೆಬ್ ಸೀರಿಸ್ ಸಿದ್ಧಪಡಿಸಿದ್ದ ಎಎಂಆರ್ ರಮೇಶ್ ಹಾಗೂ ತಂಡಕ್ಕೆ ನ್ಯಾಯಾಲಯದ ಆದೇಶ ಶಾಕ್ ತಂದಿದ್ದು ಸೀರಿಸ್ ಬಿಡುಗಡೆಗೆ ಅಡ್ಡಿ ಉಂಟಾಗಿದೆ.

ಈ ಹಿಂದೆಯೂ ಅಟ್ಟಹಾಸ ಬಿಡುಗಡೆಗೆ ಮುತ್ತುಲಕ್ಷ್ಮೀ ತೀವ್ರ ವಿರೋಧ ಎದುರಿಸಿದ್ದ ರಮೇಶ್ ಗೆ ಮತ್ತೊಮ್ಮೆ ಕಾಡುಗಳ್ಳನ ಪತ್ನಿ ಅಡ್ಡಗಾಲಾಗಿ ನಿಂತಿದ್ದು ವೆಬ್ ಸೀರಿಸ್ ರಿಲೀಸ್ ಗೆ ನ್ಯಾಯಾಲಯ ನೀಡೋ ಆದೇಶ ಮಹತ್ವದ್ದಾಗಲಿದೆ.

Comments are closed.