5 ಸಾವಿರಕ್ಕೂ ಅಧಿಕ ಹಾಡುಗಳ ಮೂಲಕ ಮನಗೆದ್ದ ಗಾಯಕ….! ಬಹುಭಾಷೆಯ ಮೆಲೋಡಿ ಸಿಂಗರ್ ಗೆ ಹುಟ್ಟುಹಬ್ಬದ ಸಂಭ್ರಮ…!!

ರಾಜೇಶ್ ಕೃಷ್ಣನ್….ಹೆಸರು ಕೇಳದವರರಾರು? ಜೇನಿನಲ್ಲಿ ಅದ್ದಿ ತೆಗೆದಂತೆ ಹೊರಬರುವ ಗಾನ ಸುಧೆಗೆ ಮನಸೋಲದವರಾರು? ಅಂತಹ ಮೆಲೋಡಿ ಸಿಂಗರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ,ತಮಿಳು,ತೆಲುಗು,ಹಿಂದಿ ಸೇರಿ ಹಲವು ಭಾಷೆಯಲ್ಲಿ ಮನಮುಟ್ಟುವಂತೆ ಹಾಡುವ ರಾಜೇಶ್ ಕೃಷ್ಣನ್ ಕನ್ನಡ ಸಂಗೀತ ಲೋಕದ ಅನರ್ಘ್ಯ ರತ್ನ.

https://kannada.newsnext.live/ksrtc-trademark-contravercy/

1991 ರಲ್ಲಿ ಕನ್ನಡದಲ್ಲಿ ಗೌರಿ ಗಣೇಶ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿಂಗರ್ ಆಗಿ ಪಾದಾರ್ಪಣೆ ಮಾಡಿದ ರಾಜೇಶ್ ಅವರು, ಇದುವರೆಗೂ ಕನ್ನಡದಲ್ಲಿ 5 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅಷ್ಟೇ ಅಲ್ಲ ತೆಲುಗಿನಲ್ಲಿ 500 ಕ್ಕೂ ಅಧಿಕ ಹಾಗೂ ತಮಿಳು ಹಿಂದಿಯಲ್ಲೂ 200 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಭಕ್ತಿಗೀತೆ, ಗಜಲ್, ಜಾನಪದ ಗೀತೆ, ಅಲ್ಬಂ ಸೇರಿದಂತೆ ವಿವಿಧ ಪ್ರಾಕಾರದ ಸಂಗೀತದಲ್ಲೂ ಅದ್ಭುತ ಗೀತೆಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ರಾಜೇಶ್ ಕೃಷ್ಣನ್ ಕೆಲ ಸಿನಿಮಾದಲ್ಲೂ ನಟಿಸಿದ್ದಾರೆ.

https://kannada.newsnext.live/cabinet-approves-model-tenancy-act-security-deposit-to-rent-hike-all-you-need-to-know/

ಮತ್ತೇರಿಸುವ ಹಾಡುಗಳಿಂದ ಆರಂಭಿಸಿ ಭಕ್ತಿಗೀತೆಯವರೆಗೆ ಎಲ್ಲದಕ್ಕೂ ಜೀವತುಂಬ ಬಲ್ಲ ಈ ಗಾಯಕ ರಾಜೇಶ್ ಮೂರು ವರ್ಷದಿಂದಲೇ ತಮ್ಮ ತಾಯಿ ಮೀರಾ ಕೃಷ್ಣನ್ ಅವರಿಂದ ಸಂಗೀತ ಅಭ್ಯಾಸ ಆರಂಭಿಸಿದರು.

https://kannada.newsnext.live/india-corona-today-updates/

ಹಂಸಲೇಖ ಅವರ ಗರಡಿಯಲ್ಲಿ ಹೆಚ್ಚಿನ ಹಾಡುಗಳನ್ನು ಪ್ರಸ್ತುತ ಪಡಿಸಿದ ರಾಜೇಶ್ ಕೃಷ್ಣನ್, ಬಾಲ್ಯದಿಂದಲೂ ಸಂಗೀತ ಪ್ರಿಯರು. 30 ವರ್ಷಗಳಿಂದ ಸ್ಯಾಂಡಲ್ ವುಡ್ ನ ಸಿನಿಮಾಗಳಿಗೆ ಜೀವತುಂಬುತ್ತಿರುವ ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯನದ ಜೊತೆಗೆ ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿದ್ದಾರೆ.

ಕೆಲವರ್ಷಗಳಿಂದ ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋದಲ್ಲಿ ನಿರ್ಣಾಯಕರಾಗಿಯೂ  ಕಾಣಿಸಿಕೊಳ್ಳುತ್ತಿರುವ ರಾಜೇಶ್ ಕೃಷ್ಣನ್ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ದತ್ತು ಪುತ್ರ ಎಂದೇ ಪರಿಗಣಿಸಲ್ಪಡುತ್ತಿದ್ದಾರೆ.

Comments are closed.