ಉಡುಪಿಯಲ್ಲಿ ಕೊರೊನಾ ಕಟ್ಟಿಹಾಕಲು ಜಿಲ್ಲಾಧಿಕಾರಿ ಮಾಸ್ಟರ್ ಫ್ಲ್ಯಾನ್ : 33 ಗ್ರಾ.ಪಂ. ಸಂಪೂರ್ಣ ಬಂದ್

ಉಡುಪಿ : ಕರಾವಳಿಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಜಿಲ್ಲೆಯ 33 ಗ್ರಾಮ ಪಂಚಾಯತ್ ಗಳನ್ನು ಬಂದ್ ಮಾಡುವ ಮೂಲಕ ಕೊರೊನಾ ಕಟ್ಟಿ ಹಾಕಲು ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದಲೂ ಜಿಲ್ಲೆಯ 33 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೂ ಕೂಡ ಅವಕಾಶವನ್ನು ನಿರ್ಬಂಧಿಸ ಲಾಗಿದೆ. ಹೀಗಾಗಿ ಜನರ ಓಡಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ.

ಕೊರೊನಾ ಸೋಂಕಿತರು ಮನೆಯಿಂದ ಹೊರಗಡೆ ಓಡಾಡುವ ಕುರಿತು ದೂರುಗಳು ಕೇಳಿ ಬರುತ್ತಿದ್ದಂತೆಯೇ ಕೊರೊನಾ ಸೋಂಕಿತರ ಮನೆಗಳನ್ನೇ ಸೀಲ್ ಡೌನ್ ಮಾಡುವ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮಹತ್ವದ ನಿರ್ಧಾರವನ್ನು ಕೈಗೊಂಡು, ತಾವೇ ಸ್ವತಃ ಮನೆಗಳನ್ನು ಸೀಲ್ ಮಾಡಿದ್ದರು. ಇದೀಗ ಸೋಂಕಿತರ ಮನೆಗಳ ಜೊತೆಗೆ ಇದೀಗ 50ಕ್ಕೂ ಅಧಿಕ ಸೋಂಕಿತರು ಇರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಗ್ರಾಮ ಪಂಚಾಯತ್ ಲಾಕ್ ಡೌನ್ ಕಾರ್ಯಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನರೂ ಕೂಡ ಜಿಲ್ಲಾಡಳಿತ ಕಾರ್ಯ ಕ್ಕೆ ಸಾಥ್ ಕೊಟ್ಟಿದ್ದಾರೆ. ಹೀಗೆ ಆದ್ರೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರೋದು ಗ್ಯಾರಂಟಿ.

Comments are closed.