sleep with your head facing north ? ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು.. ಈ ಮಾತನ್ನು ನಮ್ಮ ಪೂರ್ವಜರಿಂದಲೂ ಕೇಳುತ್ತಲೇ ಬಂದಿದ್ದೇವೆ. ಯಾಕೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಅಂತಾ ಪ್ರಶ್ನಿಸಿದ್ರೆ, ಪ್ರತಿಯೊಬ್ಬರು ಹೇಳುವುದು ವಿನಾಯಕನ ಹುಟ್ಟಿನ ಕಥೆಯನ್ನು. ಹಾಗಾದ್ರೆ ಉತ್ತರ ದಿಕ್ಕಿಗೆ ಮಲಗಬಾರದು ಅನ್ನೋದು ಕೇವಲ ಪುರಾಣಕ್ಕೆ ಅಷ್ಟೇ ಸೀಮಿತವಾ ? ಖಂಡಿತಾ ಇಲ್ಲ, ಯಾಕೆಂದ್ರೆ ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ.

ಪಾರ್ವತಿ ಸ್ನಾನಕ್ಕೆ ತೆರಳುವಾಗ ಮಣ್ಣಿನ ಮೂರ್ತಿಯೊಂದನ್ನು ಮಾಡಿ ಅದಕ್ಕೆ ಜೀವವನ್ನು ಕೊಡುತ್ತಾಳೆ. ಯಾರೇ ಬಂದರೂ ಕೂಡ ಬಾಗಿಲು ತೆಗೆಯ ಬಾರದು ಅಂತಾ ಬಾಲಕನಿಗೆ ಕಟ್ಟಪ್ಪಣೆಯನ್ನು ಹೊರಡಿಸುತ್ತಾಳೆ. ಹೀಗಾಗಿಯೇ ಬಾಲಕ ಮನೆಗೆ ಶಿವ ಬಂದಾಗಲೂ ಬಾಗಿಲು ತೆರೆಯೋದಿಲ್ಲ. ಇಷ್ಟಕ್ಕೆ ಕೋಪಗೊಂಡ ಶಿವ ಬಾಲಕನ ತಲೆಯನ್ನು ಕಡಿಯುತ್ತಾನೆ.
ಸ್ನಾನ ಗೃಹದಿಂದ ಬಂದ ಪಾರ್ವತಿ ತನ್ನ ಮಗನನ್ನು ಕೊಂದು ಹಾಕಿರುವುದಕ್ಕೆ ಕಣ್ಣೀರು ಸುರಿಸುತ್ತಾಳೆ. ಆತನ ತಲೆಯನ್ನು ಮರಳಿ ಜೋಡಿಸುವಂತೆ ವಿನಂತಿಸುತ್ತಾಳೆ. ಆಗ ಶಿವ ಆ ತಲೆಯನ್ನು ಜೋಡಿಸಲು ಸಾಧ್ಯವಿಲ್ಲ, ಆದರೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದವರ ತಲೆಯನ್ನು ಕಡಿದು ತನ್ನಿ ಎಂಬ ಆಜ್ಞೆ ಮಾಡುತ್ತಾನೆ.
ಇದನ್ನೂ ಓದಿ : ಸಕ್ಕರೆ ಖಾಯಿಲೆ ಹತೋಟಿಗೆ ತರುತ್ತೆ ಮೆಂತ್ಯ ಕಾಳು – ಎದೆ ಹಾಲು ಹೆಚ್ಚಿಸೋಕೆ ಇದು ಉತ್ತಮ ಔಷಧ
ಶಿವನ ಆಜ್ಞೆಯ ಬೆನ್ನಲ್ಲೇ ಅರಸಿ ಹೊರಟ ಸೇವಕರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯನ್ನು ನೋಡುತ್ತಾರೆ. ನಂತರ ಆನೆಯ ತಲೆಯನ್ನು ಕಡಿದು ತಂದು ಬಾಲಕನ ದೇಹಕ್ಕೆ ಜೋಡಿಸುತ್ತಾರೆ. ಶಿವ ಆತನಿಗೆ ಜೀವ ನೀಡುತ್ತಾನೆ. ಅಲ್ಲಿಂದ ವಿನಾಯಕನ ಸೃಷ್ಟಿಯಾಯ್ತು. ಹೀಗಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಅನ್ನೋದು ಪುರಾಣ.
ಹಾಗಾದ್ರೆ ನಿಜ್ಕಕೂ ಉತ್ತರ ದಿಕ್ಕಿಗೆ ಮಲಗಿದ್ರೆ ಅಪಾಯವಾಗುತ್ತಾ ? ಈ ಪ್ರಶ್ನೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡಿದ್ರೆ ಸಿಗುವ ಉತ್ತರ ಕೂಡ ಅಷ್ಟೇ ಅಚ್ಚರಿಯಾಗಿದೆ. ಖ್ಯಾತ ವೈದ್ಯರಾಗಿರುವ ಡಾ.ರಾಜುಕೃಷ್ಣಮೂರ್ತಿ ಅವರು ಹೇಳುವಂತೆ. ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗ ಬಾರದಂತೆ. ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದ್ರೆ ಏನಾಗುತ್ತೆ ?

ಉತ್ತರ ದಿಕ್ಕಿನಲ್ಲಿ ಅತೀ ಹೆಚ್ಚು ಮ್ಯಾಗ್ನೇಟಿಕ್ ವೇವ್ಸ್ ಜಾಸ್ತಿ ಇರುತ್ತೆ. ದಕ್ಷಿಣ ದಿಕ್ಕಿನಲ್ಲಿ ಮ್ಯಾಗ್ನೇಟಿಕ್ ವೇವ್ಸ್ ಕಡಿಮೆ ಇರಲಿದೆ. ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದ್ರೆ ಮ್ಯಾಗ್ನೇಟಿಕ್ ವೇವ್ಸ್ ಹೆಚ್ಚಾಗಿ, ಮ್ಯಾಗನೇಟ್ ವೇವ್ಸ್‌ನಿಂದಾಗಿ ಮೆದುಳಿನಲ್ಲಿ ರಕ್ತದೊತ್ತಡ ಹೆಚ್ಚಾಗಲಿದೆ. ಅಲ್ಲದೇ ಇದರಿಂದ ರಕ್ತಶ್ರಾವ ಉಂಟಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ : ಪ್ರೋಟಿನ್ ಶೇಕ್ ಕುಡಿಯೋದ್ರಿಂದ ಕಾರ್ಡಿಕ್ ಅರೆಸ್ಟ್
ರಕ್ತದೊತ್ತಡ ಹೆಚ್ಚಾಗೋದ್ರಿಂದ ಹೈಪರ್ ಟೆನ್ಶನ್ ಜಾಸ್ತಿಯಾಗಲಿದೆ. ಅಲ್ಲದೇ ರಕ್ತನಾಳದ ಸಮಸ್ಯೆಯಿಂದ ರಕ್ತಸ್ತಾವ ಉಂಟಾಗಿ ಸ್ಟ್ರೋಕ್ ಆಗುವ ಸಾಧ್ಯತೆಯಿದೆ. ಮೆದುಳಿನಲ್ಲಿ ಸ್ರಾವದಿಂದ ಕೆಟ್ಟ ಕನಸುಗಳು ಬೀಳುವ ಸಾಧ್ಯತೆಯಿದೆ. ಇದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುವವರೂ ಇದ್ದಾರೆ. ಉತ್ತರದ ಬದಲು ದಕ್ಷಿಣಕ್ಕೆ ತಲೆ ಇಟ್ಟು ಮಲಗೋದು ಉತ್ತಮ.
ಇದನ್ನೂ ಓದಿ : Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ
ಮಲಗುವ ದಿಕ್ಕುಗಳ ವಿಚಾರಕ್ಕೆ ಬಂದ್ರೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಲೆಕ್ಕಾಚಾರವನ್ನು ನೋಡಿದ್ರೆ, ದಕ್ಷಿಣ ಮತ್ತು ಉತ್ತರ ದಿಕ್ಕಿಗಿಂತ ಪೂರ್ವ ದಿಕ್ಕು ಉತ್ತಮವಂತೆ. ಸೂರ್ಯ ಉದಯಿಸುವ ಧಿಕ್ಕಿನಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಇರುವುದರಿಂದ ಪೂರ್ವ ದಿಕ್ಕು ಅತ್ಯಂತ ಶ್ರೇಷ್ಟ ಎನ್ನಲಾಗುತ್ತದೆ.
Sleeping Tips : What happens if you sleep with your head facing north ? Which direction is best to sleep, here is the scientific reason