ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಅಕ್ರಮವಾಗಿ ಡ್ರಗ್ ಖರೀದಿ ಮಾಡಿರುವ ವಿಚಾರಕ್ಕೆ ಇದೀಗ ಪುಷ್ಟಿ ಸಿಕ್ಕಿದ್ದು, ಸ್ವತಃ ರಿಯಾ ಚಕ್ರವರ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಸುಶಾಂತ್ ಸಿಂಗ್ ಮನೆ ಕೆಲಸದವನಾದ ದೀಪೇಶ್ ಎನ್ಸಿಬಿ ಅಧಿಕಾರಿಗಳಿಗೆ ತಿಳಿಸಿದ ಬೆನ್ನಲ್ಲೇ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದೆ. ಇಷ್ಟು ದಿನ ಹಾರಿಕೆಯ ಉತ್ತರ ಕೊಡುತ್ತಲೇ ಬಂದಿದ್ದ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಕೊನೆಗೂ ತಪ್ಪು ಒಪ್ಪಿಕೊಂಡಿದ್ದಾರೆ. ನಾನು ನನ್ನ ಸಹೋದರನ ಮೂಲಕ ಸುಶಾಂತ್ ಸಿಂಗ್ಗಾಗಿ ಡ್ರಗ್ ಪಡೆಯುತ್ತಿದ್ದೆ. ಆದರೆ ಯಾವತ್ತೂ ಅದನ್ನು ಸೇವಿಸಿಲ್ಲ ಎಂದು ಎನ್ಸಿಬಿ ಅಧಿಕಾರಿಗಳ ಎದುರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಸುಶಾಂತ್ ಸಾವಿನ ಜತೆ ಡ್ರಗ್ಸ್ ಥಳುಕು ಹಾಕಿಕೊಂಡಿದ್ದು, ಅದರ ತನಿಖೆಯನ್ನು ಎನ್ಸಿಬಿ ಕೂಲಂಕಷವಾಗಿ ನಡೆಸುತ್ತಿದೆ. ಪರಿಣಾಮ ಈಗಾಗಲೇ ಹಲವು ಡ್ರಗ್ ಪೆಡ್ಲರ್ಗಳ ಹೆಸರು ಹೊರಬಿದ್ದಿದೆ. ಆದರೆ ರಿಯಾ ಇದುವರೆಗೂ ಒಪ್ಪಿಕೊಂಡಿರಲಿಲ್ಲ. ಇಂದು ಸತತ ಆರು ಗಂಟೆ ವಿಚಾರಣೆಗೆ ಒಳಪಟ್ಟ ರಿಯಾ ಚಕ್ರವರ್ತಿ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ
ಸುಶಾಂತ್ ಮನೆ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಮಾರ್ಚ್ 17ರಂದು ಡ್ರಗ್ ಪೆಡ್ಲರ್ ಜೈದ್ನಿಂದ ಡ್ರಗ್ಸ್ ಖರೀದಿ ಮಾಡಿದ್ದು ಗೊತ್ತು, ಅಷ್ಟೇ ಅಲ್ಲ, ನಾನೇ ಸ್ವತಃ ಸಹೋದರ ಶೋವಿಕ್ ಜತೆ ಸೇರಿ, ಜೈದ್ ಸಂಪರ್ಕ ಮಾಡುತ್ತಿದ್ದೆ ಎಂದೂ ರಿಯಾ ಎನ್ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಮಾಹಿತಿ ಸಿಕ್ಕಿದೆ