ಮಂಗಳವಾರ, ಏಪ್ರಿಲ್ 29, 2025
HomeBreakingಸಮುದ್ರದ ಆಳದಲ್ಲಿ ಮಾಂಗಲ್ಯಂತಂತುನಾನೇನ...! ತಮಿಳುನಾಡಿನಲ್ಲೊಂದು ವಿಭಿನ್ನ ಮದುವೆ....!!

ಸಮುದ್ರದ ಆಳದಲ್ಲಿ ಮಾಂಗಲ್ಯಂತಂತುನಾನೇನ…! ತಮಿಳುನಾಡಿನಲ್ಲೊಂದು ವಿಭಿನ್ನ ಮದುವೆ….!!

- Advertisement -

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅಂತಾರೆ ಆದರೆ ಅಲ್ಲಿ ನಿಶ್ಚಯವಾಗೋ ಮದುವೆ ಎಲ್ಲಿ ಬೇಕಾದ್ರು ನಡೆಯಬಹುದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲೊಂದು ಯುವಜೋಡಿ ಎಲ್ಲರಂತೆ ಕಲ್ಯಾಣಮಂಟಪದಲ್ಲಿ ತಾಳಿ ಕಟ್ಟೋ ಬದಲು ನೀರಿನಾಳದಲ್ಲಿ ಹಾರ ಬದಲಾಯಿಸಿಕೊಂಡು ಗಮನ ಸೆಳೆದಿದೆ.

ಸಮುದ್ರದಲ್ಲಿ ೬೦ ಅಡಿ ಆಳದಲ್ಲಿ ಪರಿಸರ ಸ್ನೇಹಿ ಮಂಟಪ ತಯಾರಿಸಿಕೊಂಡು ಅಲ್ಲಿ ವಿವಾಹವಾಗುವ ಮೂಲಕ ತಿರುವಣ್ಣಾಮಲೈ ನ ಚಿನ್ನಾದುರೈ ಹಾಗೂ ಕೊಯಮುತ್ತೂರಿನ ಶ್ವೇತಾ ಹೊಸಸಾಹಸ ಮಾಡಿ ಸುದ್ದಿಯಾಗಿದ್ದಾರೆ.

ಎಲ್ಲರಂತೆ ಚೌಟರಿಯ ಮಂಟಪದಲ್ಲಿ ಹಾರ ಬದಲಾಯಿಸಿಕೊಂಡು ಸಪ್ತಪದಿ ತುಳಿಯಲು ಈ ಜೋಡಿಗೆ ಮನಸ್ಸಿರಲಿಲ್ಲ. ಹೀಗಾಗಿ ಸಮುದ್ರದ ಆಳದಲ್ಲಿ ಮದುವೆಯಾಗಲು ನಿರ್ಧರಿಸಿದ ಈ ಜೋಡಿ ಅದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು.

ಚೈನೈನ ನೀಳಂಕರೈ ಕರಾವಳಿಯನ್ನು ಇದಕ್ಕಾಗಿ ಆಯ್ಕೆಮಾಡಿಕೊಂಡ ಜೋಡಿ ಮದುವೆಗಾಗಿ ಸ್ಕೂಬಾ ಡೈವಿಂಗ್ ಟ್ರೈನಿಂಗ್ ಕೂಡ ಪಡೆದುಕೊಂಡಿದ್ದರು.ಚಿನ್ನಾದುರೈ ಹಾಗೂ ಶ್ವೇತಾಗೆ ಹೀಗೆ ಮದುವೆಯಾಗೋ ಜೊತೆಗೆ ಸಮುದ್ರದಲ್ಲಿ ಪ್ಲ್ಯಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ಎಸೆಯದಂತೆ ಅರಿವು ಮೂಡಿಸುವ ಉದ್ದೇಶವೂ ಇತ್ತು.

ಹೀಗಾಗಿ ಸಮುದ್ರದ ೬೦ ಅಡಿ ಆಳದಲ್ಲಿ ಶ್ವೇತಾ ಹಾಗೂ ಚಿನ್ನಾದುರೈ ಕೇವಲ ಬಾಳೆದಿಂಡು,ಹೂವು,ಬಾಳೆಎಲೆಗಳನ್ನು ಬಳಸಿಕೊಂಡು ಸಿಂಪಲ್ ಮಂಟಪ ಸಿದ್ಧಪಡಿಸಿಕೊಂಡಿದ್ದಾರೆ. ಬಳಿಕ ಹಾರ ಬದಲಾಯಿಸಿಕೊಂಡು, ತಾಳಿ ಕಟ್ಟಿ ವಿವಾಹದ ವಿಧಿ ನಡೆಸಿದ್ದಾರೆ.

ಸ್ಕೂಬಾ ಡೈವಿಂಗ್ ಹಾಗೂ ಸಮುದ್ರದ ಅಳದ ಮದುವೆಗಾಗಿ ಈ ಜೋಡಿ ತಮ್ಮ ಸಾಂಪ್ರದಾಯಿಕ ಉಡುಪನ್ನೇ ಬಳಸಿದ್ದು ಇನ್ನೊಂದು ವಿಶೇಷ. ಚಿನ್ನಾದುರೈ ಪಂಚೆ,ಶರ್ಟ್ ಧರಿಸಿದ್ದರೇ ಶ್ವೇತಾ ಸ್ಕೂಬಾ ಡೈವಿಂಗ್ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದ್ದ ಸೀರೆ ಧರಿಸಿದ್ದರು.

ಫೆ. ೧ ರಂದು ನಡೆದ ಈ ಮದುವೆಯ ಈಗ ಎಲ್ಲರ ಗಮನ ಸೆಳೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್ ಆಗಿದೆ. ೪೫ ನಿಮಿಷಗಳ ಕಾಲ ನಡೆದ ಮದುವೆಯ ವಿಧಿಗಾಗಿ ಈ ಜೋಡಿ ಆಮ್ಲಜನಕ ಸಿಲಿಂಡರ್ ಸೇರಿದಂತೆ ಅಗತ್ಯ ಜೀವ ರಕ್ಷಕಗಳ ಸಹಾಯ ಪಡೆದುಕೊಂಡಿತ್ತು.

ಒಟ್ಟಿನಲ್ಲಿ ಮದುವೆಗೂ ವಿಭಿನ್ನ ಕಾನ್ಸೆಪ್ಟ್ ಗಳ ಕಾಲ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ‌ಮದುವೆ ಕಾಣಸಿಕ್ಕರೂ ಅಚ್ಚರಿಯೇನಿಲ್ಲ.

RELATED ARTICLES

Most Popular