ನೀರು ಎಂದು ಸ್ಯಾನಿಟೈಸರ್ ಕುಡಿದ ಸಹಾಯಕ ಆಯುಕ್ತ ! ವೈರಲ್ ಆಯ್ತು ವೀಡಿಯೋ

ಮುಂಬೈ : ಪಲ್ಸ್ ಪೊಲೀಯೋ ಲಸಿಕೆಯ ಬದಲು ಮಕ್ಕಳಿಗೆ ಸ್ಯಾನಿಟೈಸರ್ ಕುಡಿಸಿ ಸಿಬ್ಬಂದಿಗಳು ಎಡವಟ್ಟು ಮಾಡಿಕೊಂಡ ಸುದ್ದಿಯ ಬೆನ್ನಲ್ಲೇ ಐಎಎಸ್ ಅಧಿಕಾರಿಯೋರ್ವರು ನೀರು ಎಂದು ಸ್ಯಾನಿಟೈಸರ್ ಕುಡಿದು ಸುದ್ದಿಯಾಗಿದ್ದಾರೆ.

ಬೃಹನ್ ಮುಂಬೈಮಹಾನಗರ ಪಾಲಿಕೆಯಲ್ಲಿಂದು ಶೈಕ್ಷಣಿಕ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅಚಾತುರ್ಯವೊಂದು ನಡೆದು ಹೋಗಿದೆ. ಪಾಲಿಕೆಯಲ್ಲಿ ಬಜೆಟ್ ಮಂಡನೆಗೆ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ರಮೇಶ್ ಪವಾರ್ ಆಗಮಿಸಿದ್ದರು. ತಮಗೆ ಮೀಸಲಿಟ್ಟ ಜಾಗದಲ್ಲಿ ರಮೇಶ್ ಪವಾರ್ ಕುಳಿತುಕೊಳ್ಳುತ್ತಿದ್ದಂತೆಯೇ ತಮ್ಮ ಮುಂದಿದ್ದ ಸ್ಯಾನಿಟೈಸರ್ ಬಾಟಲಿ ತೆಗೆದು ನೀರು ಎಂದು ತಿಳದುಕೊಂಡು ಕುಡಿದಿದ್ದಾರೆ.

ಈ ವೇಳೆಯ ಅಲ್ಲಿಯೇ ಇದ್ದ ಸಿಬ್ಬಂದಿಗಳು ಕುಡಿಯುವುದನ್ನು ತಪ್ಪಿಸಲು ಮುಂದಾದ್ರೂ ಕೂಡ ರಮೇಶ್ ಪವಾರ್ ಬಾಟಲಿಯನ್ನು ಬಾಯಿಗಿಟ್ಟು ಸ್ಯಾನಿಟೈಸರ್ ಕುಡಿದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ರಮೇಶ್ ಪವಾರ್ ನೀರನ್ನು ಕುಡಿದು ಬಾಯಿ ಮುಕ್ಕರಿಸಿಕೊಂಡಿದ್ದಾರೆ.

ರಮೇಶ್ ಪವಾರ್ ಅವರು ಸ್ಯಾನಿಟೈಸರ್ ಕುಡಿಯುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

Comments are closed.