ಚೈನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

೭೦ ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಲೈವಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.
ರಜನಿಕಾಂತ್ ಹುಟ್ಟುಹಬ್ಬ ಕ್ಕೆ ಟ್ವೀಟ್ ನಲ್ಲಿ ಶುಭಹಾರೈಸಿರುವ ಮೋದಿ, ಪ್ರೀತಿಯ ರಜನಿಕಾಂತ್ ಅವರೇ,ನಿಮ್ಮಜನ್ಮದಿನಕ್ಕೆ ಶುಭಾಶಯ ಎಂದಿದ್ದಾರೆ. ಪ್ರಧಾನಿ ಮೋದಿ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬ ಕ್ಕೆ ವಿಶ್ ಮಾಡಿರೋದನ್ನು ನೋಡಿದ ರಜನಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಕಬಾಲಿ ಖ್ಯಾತಿಯ ರಜನಿಕಾಂತ್ ಡಿಸೆಂಬರ್ ೩೧ ರಂದು ಹೊಸ ರಾಜಕೀಯ ಪಕ್ಷ ಘೋಷಿಸಲು ಸಿದ್ಧ ವಾಗಿದ್ದು, ಹೊಸವರ್ಷದಿಂದ ಅಧಿಕೃತವಾಗಿ ತಮಿಳುನಾಡಿನ ರಾಜಕೀಯ ಕ್ಕೆ ಧುಮುಕಲಿದ್ದಾರೆ.

೨೦೨೧ ರ ಮೇನಲ್ಲಿ ನಡೆಯುವ ತಮಿಳುನಾಡಿದ ವಿಧಾನಸಭಾ ಚುನಾವಣೆಯಲ್ಲಿ ೨೩೪ ಕ್ಷೇತ್ರಗಳಲ್ಲೂ ರಜನಿಕಾಂತ್ ಹೊಸ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ನೀರಿಕ್ಷೆ ಇದೆ.