ಮೈಸೂರು : ಹಳೆ ವಿದ್ಯಾರ್ಥಿಯೋರ್ವಳ ಜೊತೆಗೆ ಶಾಲ ಶಿಕ್ಷಕನೋರ್ವ ನಡೆಸಿದ ರಾಸಲೀಲೆ ಇದೀಗ ವೈರಲ್ ಆಗಿದೆ. ಶಿಕ್ಷಕ ಹಾಗೂ ಹಳೆ ವಿದ್ಯಾರ್ಥಿನಿಯ ರಾಸಲೀಲೆಯ ಪೋಟೊಗಳು ವೈರಲ್ ಆಗುತ್ತಿದ್ದಂತೆಯೇ ಶಿಕ್ಷಕ ಪರಾರಿಯಾಗಿದ್ದಾರೆ. ಈ ಘಟನೆ ನಡೆದಿರೋದ ಮೈಸೂರಿನಲ್ಲಿ.

ಮೈಸೂರಿನ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿರೋ ಸಿದ್ದರಾಜು ಎಂಬಾತನೇ ಪರಾರಿಯಾಗಿರೋ ಶಿಕ್ಷಕ. ಸಿದ್ದರಾಜು ತನ್ನ ಶಾಲೆಯ ಸುಮಾರು 20 ವರ್ಷದ ಹಳೆ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾನೆ. ಇದೀಗ ಇಬ್ಬರ ರಾಸಲೀಲೆಯ ಪೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ತನ್ನ ರಾಸಲೀಲೆ ಬಯಲಾಗುತ್ತಲೇ ಶಿಕ್ಷಕ ನಾಪತ್ತೆಯಾಗಿದ್ದು, ರಾಂಪುರ ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾಮುಕ ಶಿಕ್ಷಕನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.