ಕಾಫಿನಾಡಲ್ಲಿ ಸಾಂಸ್ಕೃತಿಕ ಜಾತ್ರೆ : ಚಿಕ್ಕಮಗಳೂರು ಹಬ್ಬದಲ್ಲಿ ಮಿಂದೆದ್ದ ಜನರು

0

ಚಿತ್ರಗಳು : ಮಂಜುನಾಥ ಪ್ರಭು ಚಿಕ್ಕಮಗಳೂರು

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಸ್ವರ್ಗ. ಇಲ್ಲಿರೋ ಪ್ರವಾಸಿತಾಣಗಳ ಸವಿಯನ್ನು ಸವಿಯುತ್ತಿದ್ದ ಮಂದಿ ಕಳೆದ ಮೂರು ದಿನಗಳಿಂದಲೂ ಚಿಕ್ಕಮಗಳೂರು ಸಾಂಸ್ಕೃತಿಕ ಹಬ್ಬದಲ್ಲಿ ಮುಂದಿದ್ದರು. ಕಳೆದೆರಡು ವರ್ಷಗಳ ನಂತರ ನಡೆದ ಚಿಕ್ಕಮಗಳೂರು ಹಬ್ಬ ಕಾಫಿನಾಡಿನ ಮಂದಿಗೆ ಹೊಸ ಅನುಭವವನ್ನೇ ಉಣಬಡಿಸಿದೆ.

ಮೈಸೂರಿನ ಯುವತಿಯರ ಯೋಗನೃತ್ಯ ನೋಡಿ ಜನಸಾಗರವೇ ನಿಬ್ಬೆರಾಗಾಯ್ತು.. ಹೀಗೂ ನೃತ್ಯ ಮಾಡುತ್ತಾ ಮಾಡಬಹುದಾ ಯೋಗವನ್ನ ಅಂತಾ ಜನರು ಅಚ್ಚರಿ ಪಟ್ರು.. ಆ ರೀತಿಯಾಗಿ ಮೈಯಲ್ಲಿ ಮೂಳೆಯೇ ಇಲ್ಲಾ ಅನ್ನೋ ಹಾಗೆ ಯೋಗ ನೃತ್ಯ ಮಾಡಿದ ಖುಷಿ, ನೆರೆದಿದ್ದವರನ್ನ ತಮ್ಮ ಯೋಗನೃತ್ಯದ ಮೂಲಕ ಖುಷಿಪಡಿಸಿದ್ರು.

ಬಗೆಬಗೆಯ ಪೂಜಾ ಕುಣಿತಗಳು ಕೂಡ ಜಾನಪದ ಜಾತ್ರೆಯ ಮತ್ತೊಂದು ವಿಶೇಷವಾಗಿತ್ತು. ಪೈಪೋಟಿಗೆ ಬಿದ್ದೋರ ಹಾಗೆ ಒಬ್ಬರಿಗಿಂತ ಒಬ್ಬರು ತಮ್ಮ ನಿಪುಣತೆಯ ಕಲೆಯನ್ನ ಪ್ರದರ್ಶಿಸಿ ಜನರಲ್ಲಿ ಚಪ್ಪಾಳೆ ಗಿಟ್ಟಿಸಿದ್ರು.

ಈ ಬಾರಿಯ ಚಿಕ್ಕಮಗಳೂರು ಹಬ್ಬದ ಮೂಲಕ ಕಳೆದ 21 ವರ್ಷಗಳ ಹಿಂದೆ ನಿಂತಿದ್ದ ಚಿಕ್ಕಮಗಳೂರು ಹಬ್ಬಕ್ಕೆ ಮತ್ತೆ ಜೀವ ಬಂದಂತಾಗಿದೆ.

ವಿದೇಶಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಬಗೆಬಗೆಯ ನೃತ್ಯ ಎಲ್ಲರನ್ನು ಹೊಸತೊಂದು ಲೋಕಕ್ಕೆ ಕರೆದೊಯ್ದಿತ್ತು.

ಇಳಿಸಂಜೆಯಲ್ಲಿ ಸಂಗೀತದ ಝೇಂಕಾರ..! ಭರಪೂರ ಮನರಂಜನೆ ಉಣಿಸಿದ ಸೆಲೆಬ್ರಿಟಿಗಳಿಗೆ ಪ್ರೇಕ್ಷಕರ ಜೈಕಾರ..!! ರಂಗು ರಂಗಿನ ಬೆಳಕಿನಲ್ಲಿ ರಂಗೋಲಿಯ ಚಿತ್ತಾರ..! ಮ್ಯೂಸಿಕಲ್ ನೈಟ್ಗೆ ಸಾಕ್ಷಿಯಾದ ಜನಸಾಗರ..! ಸಂಗೀತ.. ಸಂಭ್ರಮ.. ಡೈಲಾಗು.. ಸಾಂಗು.. ಚಪ್ಪಾಳೆ.. ಶಿಳ್ಳೆ.. !! ವ್ಹಾಹ್.. ಕಾಫಿನಾಡಲ್ಲಿ ಮಸ್ತಿಯೋ ಮಸ್ತಿ.. ಚಿಕ್ಕಮಗಳೂರು ಹಬ್ಬದ ಸಡಗರ ಅಷ್ಟಿಷ್ಟಲ್ಲ..

ಅಜಯ್ ವಾರಿಯರ್, ಸುನೀತಾ ಜುಗಲ್, ಯುವಗಾಯಕಿ ಐರಾ, ಕಲಾವತಿದಯಾನಂದ್, ಹೇಮಂತ್, ಶಮಿತಾ ಮಲ್ನಾಡ್ , ಅಂಕಿತಾ ಕುಂಡು, ರಶ್ಮಿ ಸೇರಿ ಅನೇಕ ಗಾಯಕರ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡವು..


ತಂಪಾದ ಸಂಜೆಯಲ್ಲಿ ಶುರುವಾದ ಸಂಗೀತದ ಕಲವರ ಮಧ್ಯರಾತ್ರಿವರೆಗೂ ಜಬರ್ದಸ್ತ್ ಆಗಿ ಸಾಗಿತು.. ಚುಮು ಚುಮು ಚಳಿಯನ್ನ ಲೆಕ್ಕಿಸದೇ ಗಾಯಕರು, ನೃತ್ಯಪಟುಗಳು ವೇದಿಕೆಯಲ್ಲಿ ಫರ್ಪಾಮೆನ್ಸ್ ನೀಡ್ತಿದ್ರೆ, ಇತ್ತ ಕೆಳಗಡೆಗಿದ್ದ ಪ್ರೇಕ್ಷಕರು ಹುಚ್ಚೆದು ಕುಣಿಯುತ್ತಿದ್ರು. ಚಿಕ್ಕಮಗಳೂರು ಹಬ್ಬದ ಸಂಗೀತೋತ್ಸವ ನೆರೆದಿದ್ದ ಸಾವಿರಾರು ಮಂದಿಗೆ ಕಾಫಿನಾಡಿನಲ್ಲಿ ಸ್ವರ್ಗಲೋಕವನ್ನೇ ಭುವಿಗಿಳಿಸಿದಂತೆ ಅನುಭವ ನೀಡಿದ್ದಂತೂ ಸುಳ್ಳಲ್ಲ..

ಕರಾವಳಿಯ ಗಂಡುಕಲೆಯೆನಿಸಿರೋ ಬಡಗು ತೆಂಕು ತಿಟ್ಟಿನ ಯಕ್ಷಗಾನ ಕಲೆಯನ್ನು ನಿರೂಪಿಸುತ್ತಿರೋ ಹೆಂಗಳೆಯರು.

ಒಂದರ ಹಿಂದೆ ಒಂದರಂತೆ ಬಂದ ಜಾನಪದ ಸೊಗಡಿನ ನೃತ್ಯ, ಹಾಡುಗಳು ಜನರನ್ನ ರಂಜಿಸಿದವು.

ಅಪರೂಪದ ಮೋಹಿನಿಯಾಟ್ಟಂ ನೃತ್ಯವನ್ನು ಸಿಂಗಾರದಿಂದ ಮಾಡುತ್ತಿರೋ ಕಲಾವಿದರು. ಗಿರ ಗಿರನೆ ಗಿರಕೆ ಹೊಡೆಯುತ್ತಾ ದೋಲ್ ಚಲಂ ನಡೆಸುತ್ತಿರೋ ಮಣಿಪುರದ ವಿದ್ಯಾರ್ಥಿಗಳು. ನೃತ್ಯ, ಭರತನಾಟ್ಯ.

ಮೋಹಿನಿಯಾಟ್ಟಂನಂತಹ ದೇಶೀಯ ನೃತ್ಯ ಕಲೆಗಳೊಂದಿಗೆ ಶ್ರೀಲಂಕಾದ ಕ್ಯಾಂಡಿಯನ್, ಸ್ಟಿಕ್ ಡ್ಯಾನ್ಸ್ ಗಳು ಕೂಡ ನೆರೆದಿದ್ದವರ ಮನ ತಣಿಸಿದವು. ಕೊನೆಯ ದಿನ ಮೂಡಬಿದಿರೆಯ ಆಳ್ವಾಸ್ ಫೌಂಡೇಶನ್ ನ ವಿದ್ಯಾರ್ಥಿಗಳು ನಡೆಸಿಕೊಟ್ಟ ಕಾರ್ಯಕ್ರಮ ಕಾಫಿನಾಡಿನ ಮಂದಿಗೆ ವಿಶೇಷ ಅನುಭವವನ್ನು ಉಣಬಡಿಸಿತು.

ಭಾರ್ಗವಿ ತಂಡದವರು ನಡೆಸಿಕೊಟ್ಟ ದೀಪ ನೃತ್ಯ ಸೇರಿ ಭರತನಾಟ್ಯದ ಬೊಂಬಾಟ್ ನೃತ್ಯ ಪ್ರೇಕ್ಷಕರನ್ನ ತುದಿಗಾಲಿನಲ್ಲಿ ನಿಲ್ಲಿಸಿತು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರ ನೇತೃತ್ವದಲ್ಲಿ ನಡೆದ ಚಿಕ್ಕಮಗಳೂರು ಹಬ್ಬ ಜನಮನ ಸೂರೆಗೊಂಡಿತ್ತು.

ಮೂರು ದಿನಗಳ ಅದ್ದೂರಿ ಚಿಕ್ಕಮಗಳೂರ ಹಬ್ಬಕ್ಕೆ ಅದ್ದೂರಿ ತೆರೆ ಬಿದ್ದಿದೆ.. ಮೂರು ದಿನಗಳೂ ಕಾಫಿನಾಡ ಮಂದಿಗೆ ಭರಪೂರ ಮನರಂಜನೆ ಸಿಕ್ಕಿದೆ.. 2 ದಶಕದ ಬಳಿಕ ನಡೀತಿರೋ ಉತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು.

Leave A Reply

Your email address will not be published.