ತಿರುಮಲ: ತಿರುಪತಿ ತಿಮ್ಮಪ್ಪನಿಗೆ ಹೊತ್ತ ಹರಕೆ ಫಲಿಸಿದ್ದಕ್ಕೆ ಖುಷಿಯಾದ ದಂಪತಿ ಬರೋಬ್ಬರಿ 6.5 ಕೆಜಿ ತೂಕದ ಚಿನ್ನ ಖಡ್ಗ ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಮೆರೆದಿದ್ದಾರೆ.

ಹೈದ್ರಾಬಾದ್ ಮೂಲದ ಎಂ.ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಪತ್ನಿ ನಂದಕಾ ತಮ್ಮ ವೈಯಕ್ತಿಕ ಸಮಸ್ಯೆಗಾಗಿ ತಿರುಪತಿ ತಿಮ್ಮಪ್ಪನ ಬಳಿ ಹರಕೆ ಹೊತ್ತಿದ್ದರಂತೆ.

ಹರಕೆ ಫಲಿಸಿದ್ದಕ್ಕೆ ಖುಷಿಯಾದ ದಂಪತಿ ಬರೋಬ್ಬರಿ 6.5 ಕೆಜಿ ತೂಕದ ಚಿನ್ನದ ಖಡ್ಗವನ್ನು ತಿಮ್ಮಪ್ಪನಿಗೆ ಸಲ್ಲಿಸಿದ್ದಾರೆ.

ಕಳೆದ ವರ್ಷವೇ ಎಂ.ಶ್ರೀನಿವಾಸ್ ಪ್ರಸಾದ್ ಹರಕೆ ಸಲ್ಲಿಸೋದಿಕ್ಕೆ ಸಿದ್ಧವಾಗಿದ್ದರಂತೆ. ಆದರೆ ಕೊರೋನಾದಿಂದಾಗಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿರೋದರಿಂದ ಈಗ ದೇವಾಲಯದ ಆಡಳಿತ ಮಂಡಳಿಗೆ ತಮ್ಮ ಹರಕೆ ಸಮರ್ಪಿಸಿ ದೇವರ ದರ್ಶನ ಪಡೆದಿದ್ದಾರೆ.

ತಿರುಪತಿಗೆ ಸಲ್ಲಿಕೆಯಾದ ಈ ಹರಕೆ ಖಡ್ಗದ ಬೆಲೆ ಅಂದಾಜು 4 ಕೋಟಿ ರೂಪಾಯಿ. ಪ್ರತಿವರ್ಷವೂ ತಿರುಪತಿಗೆ ಈ ರೀತಿ ಚಿನ್ನದ ಹರಕೆ ಸಲ್ಲಿಕೆಯಾಗೋದು ಸಹಜವಾಗಿದ್ದು, ಈ ಹಿಂದೆ ಕರ್ನಾಟಕದ ಗಾಲಿ ಜನಾರ್ಧನ್ ರೆಡ್ಡಿ ಸಹ ಚಿನ್ನ ಹಾಗೂ ವಜ್ರಖಚಿತ ಕಿರೀಟ ಸಲ್ಲಿಸಿದ್ದರು.