Bus Accident : ಭೀಕರ ರಸ್ತೆ ಅಪಘಾತ : ಬಕ್ರೀದ್ ಆಚರಣೆಗೆ ತೆರಳುತ್ತಿದ್ದ 30ಕ್ಕೂ ಅಧಿಕ ಮಂದಿ ದುರ್ಮರಣ

ನವದೆಹಲಿ : ಟ್ರೈಲರ್‌ ಟ್ರಕ್‌ ಹಾಗೂ ಬಸ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಡೇರಾ ಘಾಜಿ ಖಾನ್‌ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಲಾಹೋರ್‌ನಿಂದ 430 ಕಿ.ಮೀ ದೂರದಲ್ಲಿರುವ ಡೇರಾ ಘಾಜಿ ಖಾನ್ ಜಿಲ್ಲೆಯ ತೌನ್ಸಾ ಬೈಪಾಸ್ ಬಳಿಯ ಸಿಂಧೂ ಹೆದ್ದಾರಿಯಲ್ಲಿಈ ಅಪಘಾತ ಸಂಭವಿಸಿದೆ. ಬಸ್ಸು ಸಿಯಾಲ್‌ ಕೋಟ್‌ ನಿಂದ ರಾಜನ್‌ಪುರಕ್ಕೆ ತೆರಳುತ್ತಿತ್ತು. ಈ ವೇಳೆಯಲ್ಲಿ ಟ್ರಕ್‌ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ 18ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ದ್ದಾರೆ. ಅಲ್ಲದೇ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಟ್ವೀಟ್ ನಲ್ಲಿ ಖಚಿತಪಡಿಸಿದ್ದಾರೆ.

ಇದನ್ನೂ ಓದಿ : ಮತ್ತೆ ಚರ್ಚೆಗೆ ಬಂತು ಪವಿತ್ರಾ ಗೌಡ ಹೆಸರು….! ಏನಿದು ದಚ್ಚು-ಪವಿ ಅಸಲಿ ಕಹಾನಿ…!!

ಬಸ್ಸಿನಲ್ಲಿದ್ದ ಬಹುತೇಕರು ಕಾರ್ಮಿಕರಾಗಿದ್ದು ಬಕ್ರೀದ್ ಆಚರಣೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಬಸ್ಸಿನ ಚಾಲಕ ನಿದ್ದೆಗೆ ಜಾರಿದ್ದು ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪಾಕಿಸ್ತಾನದಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚುತ್ತಿದೆ. ಅಲ್ಲದೇ ಚಾಲನಾ ಪರವಾನಗಿ ಇಲ್ಲದವರೂ ಕೂಡ ವಾಹನ ಸಂಚಾರ ಮಾಡುತ್ತಿರುವುದು ಹೆಚ್ಚುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕಣ್ಣೇ ಅದಿರಿಂದಿ ಗಾಯಕಿಗೆ ಸಂಕಷ್ಟ….! ಮೈಸಮ್ಮ ಭಕ್ತರ ಆಕ್ರೋಶಕ್ಕೆ ಗುರಿಯಾದ ಮಂಗ್ಲಿ…!!

Comments are closed.