ಸ್ಯಾಂಡಲ್ ವುಡ್ ನಟಿಮಣಿಯರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ರಾಗಿಣಿ, ಸಂಜನಾ ಬಳಿಕ ಈಗ ಕಿರಾತಕ ಸುಂದರಿ ಓವಿಯಾ ಹೆಲೆನ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಓವಿಯಾ ಹೆಲೆನ್ ವಿರುದ್ಧ ತಮಿಳುನಾಡಿನಲ್ಲಿ ಪೊಲೀಸ್ ದೂರು ದಾಖಲಾಗಿದೆ. ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗ ಈ ದೂರು ದಾಖಲಿಸಿರೋದು ವಿಶೇಷ.

ಫೆ.14 ರಂದು ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿದ್ದು, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಮೋದಿ ವಿರುದ್ಧ ಗೋ ಬ್ಯಾಕ್ ಮೋದಿ ಟ್ವೀಟರ್ ಟ್ರೆಂಡ್ ಮಾಡಲಾಗಿತ್ತು. ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಲ್ಲದೇ ಗೋ ಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿದ ಆರೋಪ ಓವಿಯಾ ಹೆಲೆನ್ ವಿರುದ್ಧ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಕಾನೂನು ವಿಭಾಗ ನಟಿ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿದೆ. ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಓವಿಯಾ ಹೆಲೆನ್ ಅಕೌಂಟ್ ನಿಂದ ಗೋ ಬ್ಯಾಕ್ ಮೋದಿ ಟ್ವೀಟ್ ಮಾಡಲಾಗಿದ್ದು, ಇದು ಸಾಮಾಜಿಕ ಸ್ವಾಸ್ಥ್ಯವನ್ನು ಹದೆಗಡಿಸುವಂತ ಪ್ರಯತ್ನವೇ ಆಗಿದೆಯೇ ಎಂದು ಪರಿಶೀಲಿಸಲು ಬಿಜೆಪಿ ಒತ್ತಾಯಿಸಿದೆ.

ಇದಲ್ಲದೇ ಓವಿಯಾ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿಜೆಪಿ, ನಟಿಯೊಂದಿಗೆ ಶ್ರೀಲಂಕಾ ಹಾಗೂ ಚೀನಾದ ಸಾಮಾಜಿಕ ಸ್ವಾಸ್ಥ್ಯ ಕದಡುವ ಶಕ್ತಿಗಳು ಒಂದಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.