ಭಾನುವಾರ, ಏಪ್ರಿಲ್ 27, 2025
HomeBreakingಬೆದರಿಕೆಗೆ ಬಿದ್ದಿದ್ದು 6 ಓಟು....! ಗಂಗಮ್ಮ ನ ಗೆಲುವಿಗೆ ಅಡ್ಡಿಯಾಯ್ತಾ ಚುನಾವಣೆ ಕರಪತ್ರ...?!

ಬೆದರಿಕೆಗೆ ಬಿದ್ದಿದ್ದು 6 ಓಟು….! ಗಂಗಮ್ಮ ನ ಗೆಲುವಿಗೆ ಅಡ್ಡಿಯಾಯ್ತಾ ಚುನಾವಣೆ ಕರಪತ್ರ…?!

- Advertisement -

ತುಮಕೂರು: ರಾಜ್ಯದಾದ್ಯಂತ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಭಿನ್ನ ಪಾಂಪ್ಲೆಟ್ ಮೂಲಕ ಗಮನ ಸೆಳೆದ ಅಭ್ಯರ್ಥಿ ತುಮಕೂರಿನ ಗಂಗಮ್ಮ. ಆದರೆ ಗಂಗಮ್ಮ ನ ಪ್ರಣಾಳಿಕೆ ಸುದ್ದಿಯಾಗಿದ್ದು ಬಿಟ್ರೇ ಗೆಲುವು ತಂದುಕೊಟ್ಟಿಲ್ಲ.

ಚುನಾವಣೆ ರಂಗೇರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು ತುಮಕೂರು ಜಿಲ್ಲೆ ಹೆಬ್ಬೂರು ಗ್ರಾ.ಪಂನ ಕಲ್ಕೆರೆ ವಾರ್ಡ್ ಅಭ್ಯರ್ಥಿ ಗಂಗಮ್ಮ.ಚುನಾವಣೆಯಲ್ಲಿ ಗೆದ್ದರೇ ಏನೆಲ್ಲ ಮಾಡ್ತಿನಿ ಅನ್ನೋದನ್ನು ಪ್ರಿಂಟ್ ಮಾಡಿಸಿದ್ದ ಗಂಗಮ್ಮ ಅದರ ಜೊತೆ ಒಂದೊಮ್ಮೆ ಚುನಾವಣೆ ಸೋತರೆ ಏನು ಮಾಡ್ತಿನಿ ಅನ್ನೋದನ್ನು ಮುದ್ರಿಸಿದ್ದರು.

ಗಂಗಮ್ಮ ನ ಚುನಾವಣೆ ಪ್ರಚಾರದ ಕರಪತ್ರ, ಪ್ರಚಾರ ಪತ್ರಕ್ಕಿಂತ ಗ್ರಾಮಸ್ಥರಿಗೆ ಬರೆದ ಬೆದರಿಕೆ ಪತ್ರದಂತಿತ್ತು.

ಆದರೇ ಈಗ ಚುನಾವಣೆ ಹಾಗೂ ಕೌಂಟಿಂಗ್ ಎರಡು ಮುಗಿದಿದ್ದು, ಗಂಗಮ್ಮ ಗೆಲ್ಲೋದಿರಲಿ ಒಂದಿಷ್ಟು ಮತ ಗಳಿಸೋಕೆ ಸಾಧ್ಯವಾಗಿಲ್ಲ.

ಗಂಗಮ್ಮನಿಗೆ ಕೇವಲ ೬ ಮತಗಳು ಬಿದ್ದಿದ್ದು, ಮೂಲಗಳ ಮಾಹಿತಿ ಪ್ರಕಾರ ಸ್ವತಃ ಗಂಗಮ್ಮನೇ ಮತದಾನಕ್ಕೆ ಹೋಗಿಲ್ಲ ಎನ್ನಲಾಗಿದೆ.

ಸೋತರೆ ಅರಳಿಕಟ್ಟೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿಸುವ ಭರವಸೆ ನೀಡಿದ್ದ ಗಂಗಮ್ಮ, ಸೋತರೇ ಗ್ರಾಮದಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ಬಯಲಿಗೆ ಎಳೆಯುವ ಬೆದರಿಕೆ ಒಡ್ಡಿದ್ದರು.ಇದೀಗ ಗಂಗಮ್ಮ ಹೀನಾಯವಾಗಿ ಸೋತಿದ್ದು ಗ್ರಾಮಸ್ಥರ ಎದೆಯಲ್ಲಿ ನಡುಕ ಪ್ರಾರಂಭವಾಗಿದೆ.

RELATED ARTICLES

Most Popular