ಬೇಬಿ ಬಂಪ್ ಜೊತೆ ಭರ್ಜರಿ ಪೋಟೋಶೂಟ್….! ಪ್ರಗೆನ್ಸಿಯಲ್ಲೂ ಮಿಂಚಿದ ಅನುಷ್ಕಾ ಶರ್ಮಾ…!!

ಹೊಸ ವರ್ಷದ ಜೊತೆಗೆ ಹೊಸ ಅತಿಥಿಯ ನೀರಿಕ್ಷೆಯಲ್ಲಿರೋ ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇನ್ನೂ ಕ್ಯಾಮರಾಗೆ ಪೋಸ್ ಕೊಡೋದನ್ನು ನಿಲ್ಲಿಸಿಲ್ಲ.

ತುಂಬು ಗರ್ಭಿಣಿ ಅನುಷ್ಕಾ ಮಗುವಿನ ಸ್ವಾಗತ ಕ್ಕೆ ದಿನಗಣನೆ ನಡೆಸಿದ್ದು ಈ ಮಧ್ಯೆ ತಮಗಾಗಿ ಪೋಟೋ ಶೂಟ್ ವೊಂದನ್ನು ಮಾಡಿಸಿಕೊಂಡಿದ್ದು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಗೆನ್ಸಿಯಲ್ಲೂ ಅನುಷ್ಕಾ ಮಾದಕತೆ ಕೊಂಚವೂ ಕಡಿಮೆಯಾಗಿಲ್ಲ.

ಇಲ್ಲಿಯೂ ಬೇಬಿ ಬಂಪ್ ಜೊತೆ ಅನುಷ್ಕಾ ಸಖತ್ ಮಾಡರ್ನ್ ಬಟ್ಟೆಯಲ್ಲಿ ಪೋಸು ನೀಡಿದ್ದಾರೆ.

ಅನುಷ್ಕಾ ಬೇಬಿಬಂಪ್ ಪೋಟೋಶೂಟ್ ಗಾಗಿ ಅವರ ವಸ್ತ್ರವಿನ್ಯಾಸಕಿ ವಿಶೇಷವಾದ ಬಟ್ಟೆವಿನ್ಯಾಸಗೊಳಿಸಿದ್ದು ಆಕೆಗೆ ಅನುಷ್ಕಾ ಧನ್ಯವಾದ ಹೇಳಿದ್ದಾರೆ.

ಪ್ರಗೆನ್ಸಿ ಅನೌನ್ಸ್ ಮಾಡಿದಾಗಿನಿಂದಲೂ ಅನುಷ್ಕಾ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿದ್ದು ಎಲ್ಲರೊಂದಿಗೆ ಬೆರೆತು ಓಡಾಡುತ್ತಾ,ಪತಿಯ ಕ್ರಿಕೆಟ್ ಮ್ಯಾಚ್ ನೋಡುತ್ತ ಕಾಲ ಕಳೆದಿದ್ಧರು.

ಅಷ್ಟೇ ಅಲ್ಲ ತಮ್ಮ ಗೈನಕಾಲಜಿಸ್ಟ್ ಅನುಮತಿ ಪಡೆದ ಅನುಷ್ಕಾ ಯೋಗಾಭ್ಯಾಸ ಮಾಡಿದ್ದಲ್ಲದೇ ಅತಿ ಕಷ್ಟವಾದ ಶಿರ್ಷಾಸನ ಕೂಡ ಮಾಡಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ಧರು‌.

ಇನ್ನು ಸದ್ಯ ವಿರಾಟ್ ಕೊಹ್ಲಿ ಕೂಡ ಮ್ಯಾಚ್ ಗಳಿಂದ ದೂರ ಉಳಿದಿದ್ದು ಅನುಷ್ಕಾ ಜೊತೆ ಕಾಲ ಕಳೆಯುತ್ತಾ ಮಗುವಿಗಾಗಿ ಶಾಪಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

Comments are closed.