ಕೊರೋನಾ ಸಂಕಷ್ಟದಲ್ಲಿ ಭಾರತ….! 110 ಕೋಟಿ ನೆರವು ಘೋಷಿಸಿದ ಟ್ವಿಟರ್….!!

ಕೊವೀಡ್ -19 ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದ್ದು, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ನಲುಗಿ ಹೋಗಿದೆ. ಹೀಗಾಗಿ ವಿಶ್ವದ ಹಲವು ರಾಷ್ಟ್ರಗಳು ಸಹಾಯಹಸ್ತ ಚಾಚಿದ್ದು, ಈಗ ಜಗತ್ತಿನ ಅತ್ಯಂತ ಪ್ರಭಾವಿ ಸಾಮಾಜಿಕ ಮಾಧ್ಯಮ ಟ್ವೀಟರ್ ಕೂಡ ನೆರವು ಘೋಷಿಸಿದೆ.

https://kannada.newsnext.live/vehical-allowed-daily-needs-dg-igp-praveensood/amp/

ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕಿಡಾಗಿರುವ ಭಾರತಕ್ಕೆ ಟ್ವಿಟರ್ ಇಂಕ್ ಅಂದಾಜು 110 ಕೋಟಿ ನೆರವು ಘೋಷಿಸಿದೆ. 15 ಮಿಲಿಯನ್ ಡಾಲರ್ ನೆರವು ಘೋಷಿಸಿರುವ ಟ್ವಿಟರ್ ಈ ಕುರಿತು ತನ್ನ ಅಕೌಂಟ್ ನಲ್ಲಿ ಅಧಿಕೃತ ಮಾಹಿತಿ ನೀಡಿದೆ.

https://kannada.newsnext.live/andrapradesh-hospital-oxigen-tragidy-11-death/amp/

ಭಾರತಕ್ಕೆ ಅಗತ್ಯ ವೈದ್ಯಕೀಯ ನೆರವು ನೀಡಲು ಮೂರು ಸರ್ಕಾರೇತರ ಸಂಸ್ಥೆಗಳಿಗೆ ಅನುದಾನ ನೀಡಲಾಗಿದೆ ಎಂದು ಟ್ವಿಟರ್ ಇಂಕ್ ನ ಸಿಇಓ ಜಾಕ್ ಪ್ಯಾಟ್ರಿಕ್ ಟ್ವಿಟ್ ಮಾಡಿದ್ದಾರೆ.

ಭಾರತದಲ್ಲಿ ಸಕ್ರಿಯವಾಗಿ ಸೇವಾಕಾರ್ಯದಲ್ಲಿ ನಿರತರಾಗಿರುವ ಕೇರ್, ಏಡ್ ಇಂಡಿಯಾ ಹಾಗೂ ಇನ್ನಿತರ ಸರ್ಕಾರೇತರ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ.

https://kannada.newsnext.live/sarigamapa-singer-subhramani-wife-death-corona-virus/amp/

ಕೇರ್ ಸಂಸ್ಥೆಗೆ 73 ಕೋಟಿ, ಏಡ್ ಇಂಡಿಯಾ ಸಂಸ್ಥೆಗೆ ಹಾಗೂ ಸೇವಾ ಸಂಸ್ಥೆಗೆ ತಲಾ 17 ಕೋಟಿ ರೂಪಾಯಿ ನೆರವು ನೀಡಲಾಗುತ್ತಿದೆ. ಈ ಮೂರು ಸಂಸ್ಥೆಗಳು ಕೊರೋನಾ ರೋಗಿಗಳಿಗೆ ಅಗತ್ಯ ಲಸಿಕೆ,ಆಮ್ಲಜನಕ ಪೊರೈಕೆಯಲ್ಲಿ  ಈ ಅನುದಾನ ಬಳಕೆ ಮಾಡಲಿದೆ.

Comments are closed.