ಹಿಂದುಳಿದವರಿಗಾಗಿ ಐಸೊಲೇಷನ್ ಸೆಂಟರ್ ತೆರೆಯಿರಿ : ಹಿಂ. ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಸಲಹೆ

ಉಡುಪಿ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಮಸ್ಯೆ ಎದುರಾಗಿದೆ‌. ಹೀಗಾಗಿ ಗುಡಿಸಲು‌ ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುವವರಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಐಸೋಲೇಷನ್ ಸೆಂಟರ್ ಆರಂಭ ಮಾಡುವಂತೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಸಲಹೆ ನೀಡಿದ್ದಾರೆ.

ಕೋರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಕೊರತೆಯಿಂದ ಮನೆಗಳಲ್ಲಿಯೇ ಐಸೋಲೇಷನ್ ಆಗುವಂತೆ ಸೂಚಿಸಲಾಗಿದೆ. ಗುಡಿಸಲು ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುವ ಹಿಂದುಳಿದ ವರ್ಗದ ಜನರಿಗೆ ಐಸೋಲೇಷನ್ ಕೇಂದ್ರದ ಅಗತ್ಯವಿದೆ.

ಐಸೋಲೇಷನ್ ಸೆಂಟರ್ ಆರಂಭಿಸಲು ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿರುವ ಹಾಸ್ಟೆಲ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾ ಗಿದೆ. ಜಿಲ್ಲಾಡಳಿತಗಳು ಈ ಕುರಿತು ಶೀಘ್ರದಲ್ಲಿಯೇ ಕ್ರಮಕೈಗೊಳ್ಳ ಬೇಕೆಂದು ಸೂಚಿಸಿದ್ದಾರೆ.

Comments are closed.