ಭಾನುವಾರ, ಏಪ್ರಿಲ್ 27, 2025
HomeBreakingಟೈರ್ ಪಂಕ್ಚರ್ ಹಾಕಿದ ಡಿಸಿ ರೋಹಿಣಿ ಸಿಂಧೂರಿ : ವಿಡಿಯೋ ವೈರಲ್

ಟೈರ್ ಪಂಕ್ಚರ್ ಹಾಕಿದ ಡಿಸಿ ರೋಹಿಣಿ ಸಿಂಧೂರಿ : ವಿಡಿಯೋ ವೈರಲ್

- Advertisement -

ಮೈಸೂರು : ಕಾರಿನ ಟೈರ್ ಪಂಕ್ಚರ್ ಆದರೇ ಜನಸಾಮಾನ್ಯರು ಟೈರ್ ಚೆಂಜ್ ಮಾಡೋದು ಕಾಮನ್. ಆದರೆ ಡಿಸಿ ರೋಹಿಣಿ ಸಿಂಧೂರಿ ಸ್ವತಃ ಟೈರ್ ಚೇಂಜ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.

ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರೋ ಡಿಸಿ ರೋಹಿಣಿ ಸಿಂಧೂರಿ ಈ ಭಾರಿ ತಮ್ಮ ಕಾರಿನ ಟೈರ್ ಚೇಂಜ್ ಮಾಡೋ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಇತ್ತೀಚಿಗಷ್ಟೇ ಕುಟುಂಬದ ಜೊತೆ ಹೊರಗಡೆ ಸುತ್ತಾಡಲು ಹೋಗಿದ್ದ ರೋಹಿಣಿ ಸಿಂಧೂರಿ ಕೈಯಲ್ಲಿ ಟೂಲ್ ಹಿಡಿದು ಕಾರಿನ ಚಕ್ರ ಬದಲಾಯಿಸಲು ಮುಂದಾಗಿದ್ದಾರೆ.

ಫುಟ್ ಪಾತ್ ನಲ್ಲಿ ಕೂತು ಟೈರ್ ಬದಲಾಯಿಸುತ್ತಿದ್ದ ರೋಹಿಣಿ ಸಿಂಧೂರಿ ಕಂಡ ಜನರು ಅಚ್ಚರಿಗೊಂಡಿದ್ದು ಆ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲರೂ ಡಿಸಿ ಸರಳತೆಯನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ ಏನ್ ಮೇಡಂ ನೀವ್ಯಾಕೆ ಈ ಕೆಲಸಕ್ಕೆ ಮುಂದಾದ್ರಿ ಅಂತ ಕೆಲವರು ಛೇಡಿಸಿದ್ದಾರೆ.

ವಿಡಿಯೋದಲ್ಲೂ ವ್ಯಕ್ತಿಯೊಬ್ಬ ಮೇಡಂ ಡಿಸಿ ರೋಹಿಣಿ ಸಿಂಧೂರಿ ಅಲ್ವಾ ಎಂದು ಪ್ರಶ್ನಿಸಿದ ಆಡಿಯೋ ಇದ್ದು, ಈ ಪ್ರಶ್ನೆಗೆ ರೋಹಿಣಿ ಸಿಂಧೂರಿ ನಕ್ಕು ಸುಮ್ಮನಾಗಿದ್ದಾರೆ. ಒಟ್ಟಿನಲ್ಲಿ ಸದಾ ಆಡಳಿತ ವೈಖರಿ,ಖಡಕ ನಿರ್ಧಾರದಿಂದ ಸುದ್ದಿಯಾಗಿರುತ್ತಿದ್ದ ರೋಹಿಣಿ ಸಿಂಧೂರಿ ಈ ಭಾರಿ ತಮ್ಮ ಕಾರಿನ ಟೈರ್ ಬದಲಾಯಿಸುವ ಮೂಲಕ ಸರಳತೆ ಪ್ರದರ್ಶಿಸಿದ್ದು ವಿಡಿಯೋ ಸೋಷಿಯಲ್ ಮೀಡಿಯಾ ದಲ್ಲಿ ಸಂಚಲನ ಮೂಡಿಸಿದೆ.

RELATED ARTICLES

Most Popular