ಬೆಂಗಳೂರು : ಮಹಿಳಾ ವೈದ್ಯರು ಡ್ರೆಸ್ ಬದಲಾಯಿಸುವುದನ್ನು ಮೊಬೈಲ್ ಮೂಲಕ ಚಿತ್ರೀಕರಿಸುತ್ತಿದ್ದ ಬಾಯ್ ನರ್ಸ್ ನನ್ನು ತಿಲಕ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಾರುತೇಶ್(31 ವರ್ಷ) ಎಂಬಾತನೆ ಬಂಧಿತ ಆರೋಪಿ. ಸಂಜಯ್ ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಟ್ರಾಮಾ ಆ್ಯಂಡ್ ಆರ್ಥೋಪೆಡಿಕ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸರ್ಜನ್ ಒಬ್ಬರು ಡ್ರಸ್ಸಿಂಗ್ ರೂಮ್ ಗೆ ತೆರಳಿದ್ದ ವೇಳೆಯಲ್ಲಿ ಮೊಬೈಲ್ ವೊಂದನ್ನು ಅಡಗಿಸಿಟ್ಟು, ಅದರಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಗಮನಿಸಿದ್ದಾರೆ. ಕೂಡಲೇ ಇತರರಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ನಂತರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಸೇರಿದ ಮೊಬೈಲ್ ಅನ್ನೋದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂಜಯ್ ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಟ್ರಾಮಾ ಆ್ಯಂಡ್ ಆರ್ಥೋಪೆಡಿಕ್ಸ್ ನಿರ್ದೇಶಕರು ದೂರಿನ ಆಧಾರದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಾರುತೇಶ್ ವಿರುದ್ದ ಐಪಿಸಿ ಸೆಕ್ಷನ್ 354-ಸಿ ಹಾಗೂ 201 ಅಡಿ ಪ್ರಕರಣ ದಾಖಲಾಗಿದ್ದು, ತಿಲಕ್ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿ ತಾನು ಯಾರೊಂದಿಗೂ ವಿಡಿಯೋವನ್ನು ಹಂಚಿಕೊಂಡಿಲ್ಲ ಎಂದು ತಿಳಿಸಿದ್ದಾನೆ ಎನ್ನಲಾಗುತ್ತಿದೆ. ಇದೀಗ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.