ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಇನ್ಮುಂದೆ ನಿಗದಿಯಾಗಿ ರುವ ಮದುವೆಗಳನ್ನು ಮನೆಯಲ್ಲಿಯೇ ಮಾಡಬೇಕು. ಅಲ್ಲದೇ 40 ಮಂದಿ ಮೀರುವಂತಿಲ್ಲ.
ಲಾಕ್ ಡೌನ್ ಬೆನ್ನಲ್ಲೇ ರಾಜ್ಯ ಸರ್ಕಾರ ಮದುವೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಕಲ್ಯಾಣ ಮಂಟಪ ಅಥವಾ ಸಭಾಂಗಣದಲ್ಲಿ ಮದುವೆ ನಡೆಸುವುದಕ್ಕೆ ನಿಷೇಧ ಹೇರಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಬಂಧಿಸಿದ ಜಂಟಿ ಆಯುಕ್ತರಿಂದ ಹಾಗೂ ಜಿಲ್ಲೆಗಳಲ್ಲಿ ಆಯಾ ವ್ಯಾಪ್ತಿಯ ತಹಶೀಲ್ದಾರ್ ಅವರಿಂದ ಮದುವೆ ಆಮಂತ್ರಣದ ಜೊತೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅಲ್ಲದೇ 40 ಪಾಸ್‌ಗಳನ್ನು ಮಾತ್ರವೇ ವಿತರಿಸಲಾಗುವುದು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.
ಮದುವೆಗಾಗಿ ವಲಯ ಆಯುಕ್ತರು ಅಥವಾ ತಹಸೀಲ್ದಾರ್ ಅವರು ಅರ್ಜಿ ಸಲ್ಲಿಸಬೇಕು. ನಂತರ 40 ಪಾಸುಗಳನ್ನು ವಿತರಿಸಲಾಗುತ್ತದೆ. ಮದುವೆಗೆ ಆಗಮಿಸುವವರು ಕಡ್ಡಾಯವಾಗಿ ಪಾಸನ್ನು ತೆಗೆದು ಕೊಂಡೇ ಬರಬೇಕು. ಒಬ್ಬರ ಪಾಸನ್ನು ಮತ್ತೊಬ್ಬರಿಗೆ ಹಸ್ತಾಂತರಿಸು ವಂತಿಲ್ಲ. ಜತೆಗೆ ಕೊರೋನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
