ಮದ್ಯಪ್ರಿಯರಿಗೆ ಗುಡ್ ನ್ಯೂಸ್ : ಇನ್ಮುಂದೆ ಹೋಮ್ ಡೆಲಿವರಿ ಕೊಡುತ್ತೆ ಸರಕಾರ

ಛತ್ತೀಸ್ ಗಡ : ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಇನ್ನೊಂದೆಡೆ ಲಾಕ್ ಡೌನ್ ಹೇರಿಕೆಯಾಗುತ್ತಿದೆ. ಈ‌ ನಡುವಲ್ಲೇ ಸರಕಾರ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.

alcohol is injurious to health

ಛತ್ತೀಸ್ ಗಢದಲ್ಲಿ ಮೇ 10 ರಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ‌. ಮದ್ಯದಂಗಡಿಗಳಿಂದ ಸರಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯವನ್ನು ಹೆಚ್ಚಿಸಿಕೊಳ್ಳಲು ಮದ್ಯಪ್ರಿಯರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಛತ್ತೀಸ್ ಗಡ ಸರಕಾರ ಮುಂದಾಗಿದೆ ಎಂದು ಅಬಕಾರಿ ಸಚಿವ ಕವಾಸಿ ಲಖ್ಮಾ ತಿಳಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳಿಗೆ ಬೀಗ ಹಾಕಿದ್ರೆ ಸರಕಾರದ ಬೊಕ್ಕಸಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹೊಸ ಪ್ಲ್ಯಾನ್ ಗೆ ಮುಂದಾಗಿದೆ. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಪ್ರತ್ಯೇಕ ಪೋರ್ಟಲ್ ತೆರೆದಿದೆ.

Comments are closed.