ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿದ ಕಾಗೋಡು ತಿಮ್ಮಪ್ಪ ಪತ್ನಿ ..!

ಉಡುಪಿ : ತನ್ನ ಹೆಸರಲ್ಲಿದ್ದ ಆಸ್ತಿಯೊಂದನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಮಾಡಿಕೊಂಡಿರುವ ಕುರಿತು ಕಾಗೋಡು ತಿಮ್ಮಪ್ಪ ಅವರ ಪತ್ನಿ ತನ್ನ ಸಹೋದರಿಯ ವಿರುದ್ದವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕಾಪುವಿನ ಟಿ.ಕೆ.ಕೋಟೆ ಗ್ರಾಮದಲ್ಲಿ ಕಾಗೋಡು ತಿಮ್ಮಪ್ಪ ಅವರ ಪತ್ನಿ ರೂಪ ಯಾನೆ ದೀಪಾ ಎಂಬವರ ಹೆಸರಲ್ಲಿ ತನ್ನ ತಾಯಿ ಹಕ್ಕಿನ ಜಮೀನಿಲ್ಲಿ ವಾಸದ ಮನೆಯಿದ್ದು, ಈ ಮನೆಗೆ ಸಹೋದರಿ ಸುಶೀಲಾ ಕೂಡ ವಾರೀಸುದಾರರಾಗಿ ದ್ದಾರೆ. ಆದರೆ ಇನ್ನೋರ್ವ ಸಹೋದರಿ ಕಲಾವತಿ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಬದಲಾವಣೆ ಮಾಡಿರುವ ಕುರಿತು ಕಾಪು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯು 2020ರ ಅಗಸ್ಟ್ ನಲ್ಲಿ ತನ್ನ ಖಾತೆ ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ಗ್ರಾಮ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ರೂಪಾ ಯಾನೆ ದೀಪಾ ಅವರು ಪರಿಶೀಲನೆ ನಡೆಸಿದಾಗ, ಉಡುಪಿಯ ಉಪನೋಂದಣಿ ಕಚೇರಿಯಲ್ಲಿ ನೋದಣಿ ಆಗಿರೋದು ಬೆಳಕಿಗೆ ಬಂದಿದೆ.

ಉಡುಪಿಯ ನೋಟರಿ ನಾರಾಯಣ ಶೆಟ್ಟಿ ಅವರಿಂದ ನೋಟರಿ ಮಾಡಿಸಿದ ನಕಲಿ ಅಧಿಕಾರ ಪತ್ರದ ಆಧಾರದ ಮೇಲೆ ಫೆಬ್ರವರಿ 6 ರಂದು ಸಹೋದರಿ ಕಲಾವತಿ ಅವರು ತನ್ನ ಹೆಸರಿಗೆ ಮನೆಯನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಕುರಿತು ಕೇಳಿದ್ದಕ್ಕೆ ತನಗೆ ಬೆದರಿಕೆಯೊಡ್ಡಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಕಾಪು ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

https://kannada.newsnext.live/7minutes-of-tearing-cake-came-to-kundapur-7th-heaven/

Comments are closed.